ಶೂ -ಸಾಕ್ಸ್ ವಿತರಿಸಿ ಉಳಿದ ಹಣ ಹಿಂದಿರುಗಿಸಲು ಆದೇಶ
ಬೆಂಗಳೂರು, ಅ.13: ಸರಕಾರಿ ಶಾಲೆಗಳಲ್ಲಿ 1ರಿಂದ 10ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ನೀಡಿ ಉಳಿಕೆಯಾಗಿರುವ ಅನುದಾನವನ್ನು ಅ.31ರೊಳಗೆ ಹಿಂತಿರುಗಿಸುವಂತೆ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಡಿಡಿಪಿಐ ಹಾಗೂ ಬಿಇಒಗಳಿಗೆ ನಿರ್ದೇಶನ ನೀಡಿದೆ.
ಶೂ ಸಾಕ್ಸ್ ಖರೀದಿಸಿದ ನಂತರವೂ ಕೆಲ ಶಾಲೆಗಳಲ್ಲಿ ಅನುದಾನ ಉಳಿಕೆಯಾಗಿದೆ. ಹಲವು ಶಾಲೆಗಳ ಕೆಲವು ತರಗತಿಗಳಲ್ಲಿ ಶೂನ್ಯ ದಾಖಲಾತಿ ಇರುವುದರಿಂದ ಅನುದಾನ ಉಳಿಕೆಯಾಗಿದೆ. ಹೀಗಾಗಿ ಉಳಿದ ಹಣವನ್ನು ಆಯುಕ್ತರ ಖಾತೆಗೆ ಆರ್‌ಟಿಜಿಎಸ್ ಮೂಲಕ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಬಿ.ಕೆ.ಬಸವರಾಜ ಆದೇಶ ಹೊರಡಿಸಿದ್ದಾರೆ.
Next Story





