ಮೂರು ಪ್ರತ್ಯೇಕ ಘಟನೆ: ಲಕ್ಷಾಂತರ ರೂ.ಮೌಲ್ಯದ ಸೊತ್ತು ಕಳವು
ಬ್ರಹ್ಮಾವರ, ಅ.13: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕಾಡೂರು ಗ್ರಾಮದ ಮಂದಾರ್ತಿ ನಿರ್ಮಕ್ಕಿ ಎಂಬಲ್ಲಿ ಕೊಕ್ಕರ್ಣೆ ರಸ್ತೆಯಲ್ಲಿರುವ ಬೇಬಿ ಪೂಜಾರ್ತಿ ಎಂಬವರ ರಘುರಾಮ ನಿಲಯ ಎಂಬ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ಬಾಗಿಲಿನ ಮಧ್ಯಭಾಗವನ್ನು ಜಖಂಗೊಳಿಸಿ ಮನೆಯೊಳಗೆ ಪ್ರವೇಶಿಸಿ ಕಳ್ಳರು, ಕಪಾಟಿನ ಸೀಕ್ರೆಟ್ ಲಾಕರನ್ನು ಮುರಿದಿದ್ದು ಅದರಲ್ಲಿ ಇರಿಸಿದ್ದ ಸುಮಾರು ಆರು ಲಕ್ಷ ರೂ. ಮೌಲ್ಯದ 280 ಗ್ರಾಂ ಚಿನ್ನ ಹಾಗೂ 50,000 ರೂ. ನಗದನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಹಾವಂಜೆ ಗ್ರಾಮದ ಇರ್ಮಾಡಿ ಕಲ್ಕುಡ ದೈವಸ್ಥಾನದ ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ದೈವಸ್ಥಾನದ ಒಳಗೆ ಹೋಗಿ ದೈವಸ್ಥಾನಕ್ಕೆ ಸಂಬಂಧಿಸಿದ ಕಲ್ಕುಡ ವರ್ತೆ ಬೆಳ್ಳಿಯ ಮುಖವಾಡ 2, ಪಂಚಲೋಹದ ವರ್ತೆಯ ಮೂರ್ತಿ 1, ಬೆಳ್ಳಿಯ ಹರಿವಾಣ 2, ಬೆಳ್ಳಿಯ ಖಡ್ಸಲೆ 1 ಒಟ್ಟು 52,000 ರೂ. ಮೌಲ್ಯದ ಸ್ವತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





