ಮೂಲ ಸೌಕರ್ಯ ಕಲ್ಪಿಸಲು ಆಗ್ರಹ

ಶಿವಮೊಗ್ಗ, ಅ. 13: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 23 ರ ಕೆಎಚ್‌ಬಿ ಕಾಲನಿ, ಗೋಪಾಳ, ಅಲ್ ಹರೀಂ ಬಡಾವಣೆ, ತುಂಗಾ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವನಸಿರಿ ಗೋಪಾಳ ನಿವಾಸಿಗಳ ಸಂಘದಿಂದ ಪಾಲಿಕೆ ಎದುರು ಧರಣಿ ನಡೆಸಲಾಯಿತು. ಗೋಪಾಳ ಬಡಾವಣೆ ಸೇರಿದಂತೆ ಹಲವರು ಬಡಾವಣೆಗಳಲ್ಲಿ ಬಾಕ್ಸ್ ಚಂರಂಡಿ ಮತ್ತು ಕಾಂಕ್ರೀಟ್ ಡೆಕ್‌ಳ ನಿರ್ಮಾನ, ಯುಜಿಡಿ ಸಂಪರ್ಕ, ಬಡಾವಣೆಗಳಲ್ಲಿರುವ ಪಾರ್ಕ್‌ಗಳ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಸ್‌ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆ, ಸ್ವಚ್ಛತಾ ಸಿಬ್ಬಂದಿಯ ಪೂರೈಕೆ, ಬೀದಿನಾಯಿ, ಸೊಳ್ಳೆಗಳ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘದಿಂದ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಸಂಘದ ಅಧ್ಯಕ್ಷ ಕೆ.ನಾಗರಾಜ, ಜಿ.ಚಂದ್ರಶೇಖರ್, ಟಿ.ವಿ. ಶ್ರೀನಿವಾಸ ರೆಡ್ಡಿ, ಎಂ. ಗೋಪಿ, ಉಮೇಶ್ ಬಾಪಟ್, ಪ್ರಕಾಶ್ ಗೌಡ, ಮನೋಹರ, ಡಿ.ಪಿ. ನಾಯಕ ಇತರರಿದ್ದರು.
Next Story





