ದಾವಣಗೆರೆ: ಬಡಾವಣೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಧರಣಿ

ದಾವಣಗೆರೆ, ಅ.13: ನಗರದ 5ನೆ ವಾರ್ಡ್‍ನ ಕಾರ್ಲ್ ಮಾಕ್ರ್ಸ್ ನಗರ, ಮಂಡಕ್ಕಿ ಭಟ್ಟಿ ಸೇರಿದಂತೆ ಇತರೆ ಬಡಾವಣೆಯಲ್ಲಿ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಇಂಡಿಯಾ ಕಮ್ಯುನಿಸ್ಟ್ ಪಕ್ಷ ವತಿಯಿಂದ ಧರಣಿ ನಡೆಸಲಾುತು.
ನಗರದ ಮಂಡಕ್ಕಿ ಭಟ್ಟಿಯಿಂದ ಹೊರಟ ಧರಣಿನಿರತರರು ಮೆರವಣಿಗೆ ಮೂಲಕ ಮಹಾನಗರ ಪಾಲಿಕೆಗೆ ಆಗಮಿಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನಗರದ ಬಹುತೇಕ ಕಡೆಗಳಲ್ಲಿ ಬೀದಿ ಬದಿ ಕಸ, ಚರಂಡಿ, ಒಳಚರಂಡಿ, ಅವ್ಯವಸ್ಥೆ, ಮ್ಯಾನ್‍ಹೋಲ್ ಹಾಳಾಗಿದ್ದು, ಶುದ್ಧ ಗಾಳಿಯಿಲ್ಲದೆ ಕೆಟ್ಟ ವಾಸನೆುಂದ ಹಂದಿ ಮತ್ತು ಸೊಳ್ಳೆಗಳ ಹಾವಳಿಯಿಂದ ವಿವಿಧ ಮಾರಣಾಂತಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಗಳು, ಶಾಲೆ ಅಂಗಡಿ ಮುಂಗಟ್ಟುಗಳು ಜಲವೃತಗೊಂಡು ನಗರ ಪ್ರದೇಶದ ಬೀದಿಗಳು ಕೆಸರಿನ ಗದ್ದೆಗಳಂತಾಗಿವೆ. ಕುಡಿವ ನೀರಿನ ಪೈಪ್‍ಗಳು ಒಡೆದು ಚರಂಡಿ ಮಿಶ್ರಿತ ನೀರನ್ನು ಜನರು ಕುಡಿಯುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬೀದಿ ಬೆಳಕಿನ ಕಂಬಗಳಲ್ಲಿ ಲೈಟಿನ ವ್ಯವಸ್ಥೆ ಇಲ್ಲದೆ ಜನರು ಕತ್ತಲಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೆಲವು ಬೀದಿ ಬದಿಯ ರೋಡ್‍ಗಳ ಎದ್ದು ನಿಂತರೇ ಇನ್ನೊಂದೆಡೆ ಜನರು ವಾಸಿಸುವ ಮನೆಗಳು ಬೀಳುವ ಹಂತದಲ್ಲಿವೆ. ಜನರಿಗೆ ಇರಲು ಮನೆಗಳಿಲ್ಲದೆ, ಆರೋಗ್ಯದ ಭದ್ರತೆಯ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಪರಶುರಾಮ್, ಶಶಿಧರ್, ರಜಾಕ್, ಮಂಜುನಾಥ್ ಕೈದಾಳ್ ಮತ್ತಿತರರು ಇದ್ದರು.







