ಕಣ್ಣಿನ ದಾನಕ್ಕೆ ಎಲ್ಲರೂ ಮುಂದಾಗಬೇಕು: ಪಾದರ್ ಕ್ಷೇವಿಯರ್

ಕೊಳ್ಳೇಗಾಲ, ಅ.13: ಅಂಧರಿಗೆ ದೃಷ್ಟಿ ದೊರೆಯುವಂತಾಗಲು ಎಲ್ಲರೂ ನೇತ್ರದಾನಕ್ಕೆ ಮುಂದಾಗಬೇಕು ಎಂದು ಸಂತ ಫ್ರಾನಿಸ್ಸ್ ಅಸ್ಸಿಸಿ ಚರ್ಚ್‍ನ ಪಾದರ್ ಕ್ಷೇವಿಯರ್ ಹೇಳಿದ್ದಾರೆ.
ಪಟ್ಟಣದ ಸಂತ ಫ್ರಾನಿಸ್ಸ್ ಶಾಲೆಯ ಆವರಣದಲ್ಲಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆ, ಜೆಎಸ್‍ಎಸ್ ಕಾಲೇಜು, ಸಂತ ಪ್ರಾನಿಸ್ಸ್ ಅಸಿಸ್ಸಿ ಸಂಸ್ಥೆ, ರೋಟರಿ ಸಂಸ್ಥೆ ಲಯನ್ಸ್ ಸಂಸ್ಥೆ ಹಾಗೂ ಕಾನೂನು ಸೇವೆಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ದೃಷ್ಠಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮರಣಾನಂತರ ನೇತ್ರದಾನ ಮಾಡುವುದರಿಂದ ಕತ್ತಲೆಯಲ್ಲಿ ಜೀವನ ನಡೆಸುತ್ತಿರುವ ದೃಷ್ಟಿಹೀನರು ಜಗತ್ತನ್ನು ಕಾಣುವಂತಾಗುತ್ತದೆ. ಕಣ್ಣಿನ ದಾನಕ್ಕೆ ಎಲ್ಲರೂ ಮುಂದಾಗಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನ್ಯಾಯಾಧೀಶರುಗಳು, ವಿವಿಧ ಸಂಘ ಸಂಸ್ಥೆ ಹಾಗೂ ವಿದ್ಯಾರ್ಥಿಗಳು ಜಾಥಾ ನಡೆಸಿದರು.
ಈ ಸಂಧರ್ಭದಲ್ಲಿ ನಗರಸಭೆ ಸದಸ್ಯ ಹರ್ಷ, ಸಿಸ್ಟರ್ ಬ್ಲೇಸ್, ಸಿಸ್ಟರ್ ರೆಜಿಜಾನ್, ಸಿಸ್ಟರ್ ವಲ್ಸ, ರೋಟರಿ ಕ್ಲಬ್‍ನ ಕುಮಾರಸ್ವಾಮಿ, ಪ್ರೇಮಲತಾ ಕೃಷ್ಣಸ್ವಾಮಿ, ರೋಟರಿ ಮಿಡ್ ಟೌನ್ ಪ್ರದೀಪ್, ಪ್ರವೀಣ್, ಉಮಾಶಂಕರ್ ಹಾಗೂ ಇನ್ನಿತರರು ಹಾಜರಿದ್ದರು.





