ಅಪ್ರಾಪ್ತರು ಬೈಕ್ ಸವಾರಿ ಮಾಡಿದರೆ ಪೋಷಕರ ವಿರುದ್ಧ ಕ್ರಮ
ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಪಾಟೀಲ್ ಎಚ್ಚರಿಕೆ

ಉಡುಪಿ, ಅ.14: ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಸವಾರಿ ಮಾಡಿದಲ್ಲಿ ಅವರ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಮಾತ್ರವಲ್ಲದೆ ಅಪಘಾತ ಸಂಭವಿಸಿದಲ್ಲಿ ಪೋಷಕರನ್ನೇ ಆರೋಪಿಯನ್ನಾಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಆಕಾಶವಾಣಿ -ಬಸ್ ನಿಲ್ದಾಣ -ಎಸ್‌ಎಂಎಸ್ ಬಳಿ ಅಪ್ರಾಪ್ತರು ವಾಹನ ಚಲಾಯಿಸುತ್ತಿರುವ ಕುರಿತು ಸಾರ್ವಜನಿಕರೊಬ್ಬರ ದೂರಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಪರ್ಕಳ ಅಪಘಾತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ತನಿಖೆ ನಡೆಸಲಾ ಗಿದ್ದು, ಮಂಗಳೂರಿನ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ರಸ್ತೆ ದುರಸ್ತಿಯ ದಾಖಲಾತಿಗಳನ್ನು ನೀಡುವಂತೆ ಪ್ರಕರಣದ ತನಿಖಾಧಿಕಾರಿಗಳು ಹೇಳಿರುವುದಾಗಿ ಎಸ್ಪಿ ತಿಳಿಸಿದರು.
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಾಡಿ ಪೇಟೆಯಲ್ಲಿ ಅನಧಿಕೃತವಾಗಿ ಸುಡುಮದ್ದು ಮಾರಾಟ ಮತ್ತು ಉಡುಪಿ ನಗರದ ಕಲ್ಸಂಕ ಬಳಿ ಪುಟ್‌ಪಾತ್‌ನಲ್ಲಿ ಸುಡುಮದ್ದು ಮಾರಾಟ ಮಾಡುವ ಬಗ್ಗೆ ಸಾರ್ವಜನಿ ಕರು ಕರೆ ಮಾಡಿ ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
1119 ಹೆಲ್ಮೆಟ್ ಕೇಸು: ಈ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 26 ಸಾರ್ವಜನಿಕ ಕರೆಗಳು ಬಂದಿದ್ದವು. ಕಳೆದ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ ದೂರಿನ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ಸಾರ್ವಜನಿಕ ಸಿಗರೇಟು ಸೇವನೆ ಮಾಡುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ 28 ಕೇಸುಗಳನ್ನು ಹಾಕಲಾಗಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದರು.
ಕಳೆದ ವಾರ ಗಾಂಜಾ ಸೇವನೆಗೆ ಸಂಬಂಧಿಸಿ 8 ಪ್ರಕರಣಗಳಲ್ಲಿ 11 ಮಂದಿ ಯನ್ನು ಬಂಧಿಸಲಾಗಿದೆ. ಗಾಂಜಾವನ್ನು ಸಬರರಾಜು ಮಾಡುವವನ ಪತ್ತೆಗಾಗಿ ಪೊಲೀಸ್ ತಂಡವೊಂದು ಹೊರ ಜಿಲ್ಲೆಗೆ ತೆರಳಿದ್ದು, ಶೀಘ್ರವೇ ಆತನನ್ನು ಪತ್ತೆ ಹಚ್ಚಿ ಬಂಧಿಸುವ ಕೆಲಸ ಮಾಡಲಿದೆ ಎಂದರು.
90 ಅಪಾಯಕಾರಿ ವಾಹನ ಚಾಲನೆ ಮತ್ತು 1,119 ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಹಿಂಬದಿ ಸವಾರರಲ್ಲಿ ಬಹುತೇಕ ಮಂದಿ ಹೆಲ್ಮೆಟ್ ಧರಿಸದೆ ಇರುವುದು ಕಂಡುಬಂದಿದ್ದು, ಇನ್ನು ಅವರ ವಿರುದ್ಧವೂ ದಂಡ ವಿಧಿಸುವ ಕೆಲಸ ಮಾಡಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದರು.
ಪತ್ನಿ ಬಗ್ಗೆ ಪತಿಗೆ ಶಂಕೆ: ತನ್ನ ಪತ್ನಿ ಪ್ರತಿದಿನ ರಾತ್ರಿ 2 ಗಂಟೆಯವರೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ವ್ಯಯಿಸುತ್ತಿದ್ದು, ಆಕೆ ಮಾದಕ ದ್ರವ್ಯ ಬಳಕೆ ಮಾಡುತ್ತಿರುವ ಬಗ್ಗೆ ಸಂಶಯ ಇದೆ. ಆಕೆ ತಪ್ಪು ದಾರಿ ಹಿಡಿಯದಂತೆ ನೋಡಿಕೊಳ್ಳಿ ಎಂದು ಪತಿಯೊಬ್ಬ ಎಸ್ಪಿಗೆ ಕರೆ ಮಾಡಿ ದೂರಿದರು.
ಬ್ರಹ್ಮಾವರದ ವ್ಯಕ್ತಿಯೊಬ್ಬರು ಕರೆ ಮಾಡಿ ಗಂಡ ಹೆಂಡತಿಯ ನಡುವಿನ ಕಲಹ ಕುರಿತು ದೂರಿಕೊಂಡರು. ಇವರನ್ನು ಬ್ರಹ್ಮಾವರ ಠಾಣೆ ಅಥವಾ ಮಹಿಳಾ ಠಾಣೆಗೆ ಕರೆಸಿ ಸಮಾಲೋಚನೆ ಮಾಡಿ ಇತ್ಯರ್ಥ ಪಡಿಸಲು ಪ್ರಯತ್ನಿ ಸಲಾಗುವುದು ಎಂದು ಎಸ್ಪಿ ಹೇಳಿದರು.
ಉಡುಪಿ ಹಳೆ ಡಯಾನ ಸರ್ಕಲ್ ಬಳಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ‘ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಇದರ ಕೆಳಗಡೆ ನಡೆದುಕೊಂಡು ಹೋಗುವಾಗ ಕಟ್ಟಡ ಬಿದ್ದು ಜೀವ ಹಾನಿ ಸಂಭವಿಸಿದರೆ ನಾವು ಜವಾಬ್ದಾರರಲ್ಲ’ ಎಂಬುದಾಗಿ ಬರೆದಿದ್ದು, ಇದನ್ನು ಕೂಡಲೇ ತೆರವು ಮಾಡಲು ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ, ಈ ಬಗ್ಗೆ ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದು ತೆರವಿಗೆ ಪ್ರಯತ್ನಿಸಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಪೊಲೀಸರ ಕೃಪಾಕಟಾಕ್ಷದಿಂದ ಭ್ರಷ್ಟಾಚಾರಗಳು ನಡೆ ಯುತ್ತಿವೆ ಎಂಬ ಸಾರ್ವಜನಿಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಕೇವಲ ಪೊಲೀಸರ ಮೇಲೆ ಆರೋಪ ಮಾಡಿದರೆ ಸಾಲದು. ಭ್ರಷ್ಟರ ಪಟ್ಟಿ ಕೊಡಿ. ಅವರು ವಿರುದ್ಧ ಕ್ರಮ ಜರಗಿಸುತ್ತೇನೆ. ಕೆಲವೇ ಮಂದಿ ಭ್ರಷ್ಟರಿಂದ ಇಡೀ ಪೊಲೀಸ್ ವ್ಯವಸ್ಥೆಯನ್ನು ದೂರುವುದು ಸರಿಯಲ್ಲ ಎಂದರು.
ಕರ್ಕಶ ಹಾರ್ನ್ ಬಳಸುವ ಬಸ್ ವಶಕ್ಕೆ: ಎಚ್ಚರಿಕೆ
ಕಾರ್ಕಳ ನಗರದಲ್ಲಿ ಕರ್ಕಶ ಹಾರ್ನ್ ಬಳಕೆ ಮತ್ತು ಬುಲೆಟ್ಗಳಲ್ಲಿ ಕರ್ಕಶ ಶಬ್ದ ಮಾಡುತ್ತಿರುವ ಕುರಿತ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಬಸ್‌ಗಳಲ್ಲಿ ಕರ್ಕಶ ಹಾನ್‌ಗೆ ಸಂಬಂಧಿಸಿ ಕಳೆದ ಒಂದು ವಾರದಲ್ಲಿ 93 ಪ್ರಕರಣಗಳನ್ನು ದಾಖಲಿಸ ಲಾಗಿದೆ. ಒಟ್ಟು ಏಳು ವಾರಗಳಲ್ಲಿ 929 ಬಸ್‌ಗಳ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗಿದೆ. ಆದರೂ ಹಾರ್ನ್ ಬಳಕೆ ಮುಂದುವರಿಯುತ್ತಿದೆ. ಈ ಹಿನ್ನೆಲೆ ಯಲ್ಲಿ ಇನ್ನು ಮುಂದೆ ಕರ್ಕಶ ಹಾರ್ನ್ ಬಳಕೆ ಮಾಡುವ ಬಸ್‌ಗಳನ್ನು ವಶಪಡಿಸಿಕೊಂಡು ಕೋರ್ಟ್ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಜೆ ನಂತರ ಹೊನ್ನಾಳದಿಂದ ಬ್ರಹ್ಮಾವರಕ್ಕೆ ಬರುವ ಬಸ್‌ಗಳು ಸಾಲಿಕೇರಿ ಮಾರ್ಗವಾಗಿ ಬಾರದೆ ದೂಪದಕಟ್ಟೆ ಮಾರ್ಗವಾಗಿ ಚಲಿಸುತ್ತಿರುವುದು, ಉಡುಪಿ ಕಲ್ಯಾಣಪುರ -ಸಂತೆಕಟ್ಟೆ ಬಸ್‌ಗಳಲ್ಲಿ ಹಿರಿಯ ಪ್ರಯಾಣಿಕರಿಗೆ ಅಗೌರವ ತೋರುವುದು ಹಾಗೂ ಹಣ ತೆಗೆದುಕೊಂಡು ಟಿಕೆಟ್ ನೀಡದಿರು ವುದು, ಕುಂದಾಪುರ -ಹಂಗಾರಕಟ್ಟೆ ಬಸ್‌ಗಳು ಸಾಸ್ತಾನ ಟೋಲ್ವರೆಗೆ ಮಾತ್ರ ಸಂಚರಿಸುತ್ತಿರುವ ಬಗ್ಗೆ ದೂರುಗಳು ಬಂದವು.
ಜ್ಯೋತಿಷಿಗಳ ಮಾಟ, ಮಂತ್ರ ನಂಬಬೇಡಿ
ವೈಯಕ್ತಿಕ ಸಮಸ್ಯೆ ಪರಿಹರಿಸುವುದಾಗಿ ಹೇಳಿ ಜ್ಯೋತಿಷಿಯೊಬ್ಬರು ಈಗಾ ಗಲೇ 7500ರೂ. ಪಡೆದುಕೊಂಡಿದ್ದು, ಆದರೆ ಅವರಿಂದ ನನ್ನ ಯಾವುದೇ ಸಮಸ್ಯೆ ಪರಿಹಾರ ಆಗಿಲ್ಲ. ಇದೀಗ ಮತ್ತೆ ಬಾಕಿ 37ಸಾವಿರ ರೂ. ಹಣ ನೀಡು ವಂತೆ ಬೆದರಿಸುತ್ತಿದ್ದಾರೆ. ಅವರು ನನ್ನ ವಿರುದ್ಧ ವಾಮಚಾರ ನಡೆಸಬಹುದೆಂಬ ಹೆದರಿಕೆ ನನಗೆ ಆಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಕರೆ ಮಾಡಿ ಅಳಲು ತೋಡಿಕೊಂಡರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎಸ್ಪಿ ಡಾ.ಸಂಜೀವ ಪಾಟೀಲ್, ಮಾಟ ಮಂತ್ರಗಳನ್ನು ನಂಬಿ ಹಣವನ್ನು ಕಳೆದುಕೊಳ್ಳಬೇಡಿ. ಇದರಿಂದ ಸಮಸ್ಯೆ ಪರಿ ಹಾರ ಆಗಲ್ಲ. ದೇವರನ್ನು ನಂಬಿ, ಮನೆಯಲ್ಲಿ ದೇವರಿಗೆ ಕೈ ಮುಗಿಯಿರಿ. ಇರುವ ಹಣದಲ್ಲಿ ನೆಮ್ಮದಿಯ ಜೀವನ ಕಂಡುಕೊಳ್ಳಿ. ಅದು ಬಿಟ್ಟು ಜ್ಯೋತಿಷಿ ಗಳನ್ನು ನಂಬಿ ಹಣ ಕಳೆದುಕೊಳ್ಳಬೇಡಿ. ಇನ್ನು ಮುಂದೆ ಅವರು ಹಣ ನೀಡು ವಂತೆ ಪೀಡಿಸಿದರೆ, ದೂರು ನೀಡಿ. ಕೂಡಲೇ ಆತನನ್ನು ಬಂಧಿಸಲಾಗುವುದು ಎಂದು ಹೇಳಿದರು.







