ವಗ್ಗ: ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ

ಬಂಟ್ವಾಳ, ಅ. 14: ಹಿರಿಯ ನೇತಾರ, ಪ್ರಗತಿಪರ ಕೃಷಿಕ, ಕಂಬಳ ಕ್ಷೇತ್ರದ ಅಗ್ರಗಣ್ಯ ಎಚ್.ನಾರಾಯಣ ರೈ ಕಾಡಬೆಟ್ಟು ಅವರ 10ನೆ ವರ್ಷದ ಸಂಸ್ಮರಣೆ ಕಾರ್ಯಕ್ರಮ ವಗ್ಗ ಕಾಡಬೆಟ್ಟು ಶಾರದಾಂಭ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಂಬಳ ಕ್ಷೇತ್ರದ ಸಾಧಕರಾದ ಜಯ ಶೆಟ್ಟಿ ಕಕ್ಯಪದವು, ಚಂದ್ರಹಾಸ ಶೆಟ್ಟಿ ಮಧ್ವ, ತಿಮ್ಮಪ್ಪ ಶೆಟ್ಟಿ ಕಾರಿಂಜ ಬೈಲು, ಸುಂದರ ಪೂಜಾರಿ ಕಾಡಬೆಟ್ಟು ಇವರನ್ನು ಸನ್ಮಾನಿಸಲಾಯಿತು.
ದ.ಕ.ಕಂಬಳ ಸಮಿತಿ ಸಂಚಾಲಕ ಗುಣಪಾಲ ಕಡಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಸಾಮಾಜಿಕ ನೇತಾರ ಕೆ.ಹರಿಕೃಷ್ಣ ಬಂಟ್ವಾಳ್, ಭೂ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ವೆಂಕಪ್ಪ ಕಾಜವ ಪಜೀರು, ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಮಲ ನಾರಾಯಣ ರೈ, ಜಯಂತ್ ವಿ.ಶೆಟ್ಟಿ, ಸದಾನಂದ ಶೆಟ್ಟಿ, ದಾಮೋದರ ರೈ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಸಂಜೆ ಸುದರ್ಶನ ವಿಜಯ, ಭಾರ್ಗವ ವಿಜಯ ಯಕ್ಷಗಾನ ಬಯಲಾಟ ಜರಗಿತು.





