ಮಟ್ಕಾ ಜುಗಾರಿ: ಆರು ಮಂದಿ ಸೆರೆ
ಉಡುಪಿ, ಅ.14: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಅ.13ರಂದು ಮಟ್ಕಾ ಜುಗಾರಿಗೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಗ್ರಾಮದ ವರಹಸ್ವಾಮಿ ದೇವಸ್ಥಾನದ ಬಳಿ ಮರವಂತೆಯ ವಿಜಯ ಕಾಂಚನ್(42), ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರೂರು ಮೂರ್ಕೈ ಬಳಿ ಮೂಡ್ಲಕಟ್ಟೆಯ ಶಿವರಾಜ್(24), ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಪಳ್ಳಿಗುಡ್ಡೆ ಮೈದಾನದ ಬಳಿ ಏಣಗುಡ್ಡೆಯ ರವಿ ಪೂಜಾರಿ(40), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಶಿರೂರು ಹೆಲಿಪ್ಯಾಡ್ ಬಳಿ ರಾಜು(30), ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಿಯಾಳಿ ಬಸ್ ನಿಲ್ದಾಣದ ಬಳಿ ಚೇರ್ಕಾಡಿಯ ದಿವಾಕರ ಪೂಜಾರಿ(34), ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ವೆ ಗ್ರಾಮದ ತಾರೀಕಟ್ಟೆ ಬಸ್ ನಿಲ್ದಾಣದ ಬಳಿ ಹೈಕಾಡಿಯ ರಾಮ(45) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





