Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಾರ್ಷಿಕ ಜಾತ್ರೆಯಂತೆ ಜನಪ್ರಿಯಗೊಂಡಿರುವ...

ವಾರ್ಷಿಕ ಜಾತ್ರೆಯಂತೆ ಜನಪ್ರಿಯಗೊಂಡಿರುವ ಕೃಷಿ ಮೇಳ: 200ಕ್ಕೂ ಅಧಿಕ ಪ್ರದರ್ಶನ ಮಳಿಗೆ

ಬಿ.ಬಿ. ಶೆಟ್ಟಿಗಾರ್ಬಿ.ಬಿ. ಶೆಟ್ಟಿಗಾರ್14 Oct 2017 9:42 PM IST
share
ವಾರ್ಷಿಕ ಜಾತ್ರೆಯಂತೆ ಜನಪ್ರಿಯಗೊಂಡಿರುವ ಕೃಷಿ ಮೇಳ: 200ಕ್ಕೂ ಅಧಿಕ ಪ್ರದರ್ಶನ ಮಳಿಗೆ

ಬ್ರಹ್ಮಾವರ, ಅ.14: ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆರಂಭಗೊಂಡ ಎರಡು ದಿನಗಳ ಕೃಷಿ ಮೇಳ ಊರಿನ ವಾರ್ಷಿಕ ಜಾತ್ರೆಯಂತೆ ಜನಪ್ರಿಯಗೊಂಡಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ರೈತರು, ಮಹಿಳೆಯರು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಆಧುನಿಕ ಯಂತ್ರಗಳ ಮಳಿಗೆಗಳು, ವಿಭಿನ್ನ ತಳಿಯ ಬೀಜಗಳ ಮಳಿಗೆ ಸಹಿತ ಬಣ್ಣ ಬಣ್ಣದ ವೈವಿಧ್ಯಮಯ ವಿಭಿನ್ನ ಜಾತಿಯ ಹೂ, ಹಣ್ಣು ಹಾಗೂ ಇತರೆ ಗಿಡಗಳ ಮಳಿಗೆಗಳು ಇವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ರೈತರ ಹಾಗೂ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದು ಇಲ್ಲಿರುವ ವಸ್ತು ಪ್ರದರ್ಶನ ಹಾಗೂ ತೆರೆದಿರುವ 200ಕ್ಕೂ ಅಧಿಕ ಮಳಿಗೆಗಳು. ಕಾರ್ಯ ಕ್ರಮದ ಉದ್ಘಾಟನೆಗೂ ಮುನ್ನವೇ ಗುಂಪು ಗುಂಪಾಗಿ ಆಗಮಿಸಿದ ಮಹಿಳೆಯರೇ ಅಧಿಕವಿದ್ದ ರೈತರು, ಮಳಿಗೆಗಳಿಗೆ ಸುತ್ತು ಹಾಕಿ ಅಲ್ಲಿನ ಪ್ರತಿಯೊಂದು ವಸ್ತುಗಳ ಬಗ್ಗೆಯೂ ವಿಚಾರಿಸುತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೇವಲ ಉಡುಪಿ, ದ.ಕ.ದಿಂದ ಮಾತ್ರವಲ್ಲ ಆಸುಪಾಸಿನ ಜಿಲ್ಲೆಗಳ ರೈತರೊಂದಿಗೆ ದೂರದ ಶಿವಮೊಗ್ಗ, ದಾವಣಗೆರೆಯಿಂದಲೂ ಹಲವು ರೈತರು ಸುದ್ದಿ ತಿಳಿದು ಬ್ರಹ್ಮಾವರಕ್ಕೆ ಬಂದಿದ್ದು, ಹೊಸ ವಿಷಯಗಳ ಕುರಿತು ತಿಳಿದುಕೊಳ್ಳಲು ತಾವು ಉತ್ಸುಕರಾಗಿರುವುದಾಗಿ ಹೇಳಿದರು.

ಇಲ್ಲಿರುವ ಹೆಚ್ಚಿನ ಮಳಿಗೆಗಳು ಕೃಷಿ ಬದುಕಿಗೆ ಸಂಬಂಧಿಸಿದ್ದು. ಹೊಸ ಹೊಸ ಕೃಷಿ ಉಪಕರಣಗಳ ಪ್ರದರ್ಶನ ಇಲ್ಲಿ ಭಾರೀ ಜನರನ್ನು ಆಕರ್ಷಿಸುತ್ತಿತ್ತು. ಅವುಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿ ಅವುಗಳ ಲಾಭ-ನಷ್ಟದ ಪರಾಮರ್ಶೆ ಯೂ ಸ್ಥಳದಲ್ಲಿ ನಡೆಯುತ್ತಿತ್ತು.

ಕಸಿಕಟ್ಟಿದ ಹೂ, ಹಣ್ಣು, ತರಕಾರಿಗಳ ಗಿಡಗಳ ಸ್ಟಾಲ್‌ಗಳು ಸಹ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತಿದ್ದವು. ಇಲ್ಲಿ ವ್ಯಾಪಾರ, ಚೌಕಾಸಿಯೂ ಜೋರಾಗಿ ಯೇ ನಡೆದಿತ್ತು. ಇವುಗಳೊಂದಿಗೆ ಪ್ರಮುಖ ಬ್ಯಾಂಕುಗಳು ತಮ್ಮ ಸ್ಟಾಲ್‌ಗಳನ್ನು ತೆರೆದು ರೈತರ ಕುರಿತು ತಮ್ಮಲ್ಲಿರುವ ಯೋಜನೆಗಳತ್ತ ಜನರನ್ನು ಆಕರ್ಷಿಸಲು ಪ್ರಯತ್ನಿಸುವುದು ಕಂಡುಬಂತು.

ಇನ್ನು ಕೃಷಿ ಕೇಂದ್ರವು ತಾವು ಕಂಡುಹಿಡಿದ, ಪರಿಷ್ಕರಿಸಿದ ಹೊಸ ತಳಿಗಳನ್ನು ಪ್ರದರ್ಶನಕ್ಕಿಟ್ಟಿತ್ತು. ಭತ್ತದ ವಿವಿಧ ತಳಿಗಳೊಂದಿಗೆ ವಿವಿಧ ತರಕಾರಿ, ತೆಂಗು, ಕೆಂದಾಳೆ, ಅಡಿಕೆ, ಕಾಳುಮೆಣಸು, ಗೇರುಬೀಜ, ಮಾವಿನ ಗಿಡಗಳ ವಿವಿಧ ತಳಿಗಳ ಪ್ರದರ್ಶನವೂ ಇಲ್ಲಿತ್ತು. ಸಂಪಿಗೆ, ಸೇವಂತಿಗೆ, ಗುಲಾಬಿ ಇನ್ನಿತರ ಹೂವಿನ ಗಿಡಗಳು, ಮಣ್ಣಿನಿಂದ ತಯಾರಾದ ಮಡಿಕೆ, ಪಾತ್ರೆಗಳ ಮಳಿಗೆಗಳು ಇದ್ದವು. ಮೊಲ ಸಾಕಾಣಿಕೆಯಲ್ಲಿ ಆಸಕ್ತಿ ಇರುವವರಿಗೆ ಈ ಬಗ್ಗೆಯೂ ಮಾಹಿತಿ ನೀಡಲಾಗುತ್ತಿತ್ತು.

ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿರುವ ಟಿಲ್ಲರ್ ಯಂತ್ರಗಳು, ಕಳೆಕೊಚ್ಚುವ ಯಂತ್ರ, ಪವರ್ ಚೈನ್ ಸಾ, ನ್ಯಾಪ್ ಸಾಕ್ ಪವರ್ ಸ್ಟ್ರೇಯರ್, ಗಾರ್ಡನ್ ಪವರ್ ಸ್ಪ್ರೇಯರ್, ಲೋಡ್ ಟ್ರಾನ್ಸ್‌ಪೋರ್ಟರ್, ಎಚ್‌ಡಿಪಿ ಸ್ಪ್ರೇಯರ್ ಪಂಪ್, ಬ್ಯಾಟರಿ ಚಾಲಿತ ಸ್ಪ್ರೇಯರ್ ಸಹಿತ ಕೃಷಿಗೆ ಸಂಬಂಧಿಸಿದ ವಿಭಿನ್ನ ಮಾದರಿಯ ಆಧುನಿಕ ಯಂತ್ರಗಳು ಮೇಳದಲ್ಲಿ ಸಬ್ಸಿಡಿ ದರದಲ್ಲಿ ಸಿಗುತ್ತಿವೆ.

ಕೃಷಿಯನ್ನು ಅಧಿಕ ತಿಳಿದುಕೊಳ್ಳುವ ಆಸಕ್ತರಿಗಾಗಿ ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಪ್ರಗತಿಪರ ಕೃಷಿಕರು, ಕೃಷಿ ತಜ್ಞರು, ವಿಜ್ಞಾನಿಗಳು, ಸಂಶೋಧಕರು ಭಾಗವಹಿಸುತಿದ್ದಾರೆ. ರವಿವಾರ ಸಂಜೆ ರೈತರು ಹಾಗೂ ವಿಜ್ಞಾನಿಗಳ ನಡುವೆ ಸಂವಾದವನ್ನು ಆಯೋಜಿಸಲಾಗಿದೆ.

ಶನಿವಾರ ಗೇರು, ಕೋಕೋ, ಕಾಳುಮೆಣಸು ಹಾಗೂ ಇತರ ತೋಟಗಾರಿಕಾ ಬೆಳೆಗಳ ವಿಚಾರ ಸಂಕಿರಣ ನಡೆಯಿತು. ಇದರಲ್ಲಿ ಡಾ.ಎಂ.ಗಂಗಾಧರ ನಾಯ್ಕ, ಡಾ.ಎಸ್. ಜೆ. ಅಂಕೇಗೌಡ, ಡಾ.ಎನ್. ಆರ್. ನಾಗರಾಜ್, ಶಿರಸಿಯ ಪ್ರಗತಿಪರ ಜೇನುಕೃಷಿಕ ಮಧುಕೇಶ್ವರ ಹೆಗ್ಡೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾಳೆ ಸಮಗ್ರ ಕೃಷಿ ಪದ್ಧತಿ, ಜಲಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ, ಪುಷ್ಪ ಕೃಷಿ ಕುರಿತು ವಿಚಾರಸಂಕಿರಣಗಳಿವೆ.

ಜಲಕೃಷಿಯಿಂದ ಕ್ರಾಂತಿ: 2 ಕೆ.ಜಿ.ಮೆಕ್ಕೆಜೋಳದಲ್ಲಿ 10 ಕೆ.ಜಿ.ಮೇವು

ಕರಾವಳಿ ಜಿಲ್ಲೆಗಳಲ್ಲೂ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಂಠಿತ ಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಜಿಲ್ಲೆಯ ಹೈನುಗಾರಿಕೆ ಉದ್ಯಮಕ್ಕೆ ಉತ್ತೇಜನ ನೀಡಲು ಜಲಕೃಷಿ ಎಂಬ ಕ್ರಾಂತಿಕಾರಿ ಕೃಷಿ ಪದ್ಧತಿಯೊಂದು ಜನಪ್ರಿಯ ಗೊಳ್ಳುತ್ತಿದೆ. ಕಡಿಮೆ ನೀರಿನ ಬಳಕೆ ಹಾಗೂ ಕಡಿಮೆ ಜಾಗದಲ್ಲಿ ಹೆಚ್ಚಿನ ಮೇವು ಉತ್ಪಾದಿಸುವ ಹೊಸ ಕೃಷಿಯನ್ನು -ಜಲಕೃಷಿಯಲ್ಲಿ ಮೇವು ಬೆಳೆ ಉತ್ಪಾದನೆ- ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಈಗೀಗ ಜನವರಿ- ಫೆಬ್ರವರಿ ತಿಂಗಳಿನಿಂದಲೇ ಹಸುಗಳಿಗೆ ಮೇವಿನ ಕೊರತೆ ಎದುರಾಗುತ್ತಿದ್ದು, ಇದಕ್ಕೆ ಕೇಂದ್ರದ ಸಂಶೋಧನೆ ಪರಿಹಾರವಾಗಿದೆ. ಉಡುಪಿ, ದಕ್ಷಿಣ ಜಿಲ್ಲೆಗಳ ಮೇವಿನ ಕೊರತೆ ನೀಗಿಸುವಲ್ಲಿ ಈ ಆವಿಷ್ಕಾರ ಸಾಕಷ್ಟು ಪರಿಣಾಮಕಾರಿಯಾಗುವ ಸಾಧ್ಯತೆಯಿದೆ.

ಬೆಳೆಸುವ ವಿಧಾನ: ಮೆಕ್ಕೆಜೋಳದ ಬೀಜವನ್ನು ನೀರಿನಲ್ಲಿ ನೆನೆಸಿ, 24 ಗಂಟೆಗಳ ಕಾಲ ಗೋಣಿಚೀಲದಲ್ಲಿ ಹಾಕಿಡಬೇಕು. ಒಂದು ದಿನದಲ್ಲಿ ಮೊಳಕೆ ಬಂದ ಅನಂತರ ಅದನ್ನು ಟ್ರೇಯಲ್ಲಿ ಬಿಡಿಸಿ ಹಾಕಬೇಕು. ಅದು ದಿನೇ- ದಿನೇ ಬೆಳೆಯುತ್ತಾ, 8ನೇ ದಿನ ಆ ಮೇವನ್ನು ಹಸುವಿಗೆ ನೀಡಬಹುದು. 2 ಕೆ.ಜಿ. ಮೆಕ್ಕೆಜೋಳದ ಬೀಜದಲ್ಲಿ 10 ಕೆ.ಜಿ. ಮೇವು ತಯಾರಿಸಬಹುದು. ಇದಕ್ಕೆ ನೀರು ಅತ್ಯಲ್ಪ ಪ್ರಮಾಣದಲ್ಲಿ ಸಾಕಾಗುತ್ತದೆ. ಅಲ್ಲದೇ ಇದು ಅತ್ಯಂತ ಪೌಷ್ಠಿಕಾಂಶಯುಕ್ತವೂ ಆಗಿದೆ.

ಕೃಷಿಕರಿಗೆ ತರಬೇತಿ: ಜಿಲ್ಲೆಗೆ ಹೊಸದಾದ ಈ ಮೇವು ಉತ್ಪಾದನೆ ಮಾದರಿ ಯನ್ನು ಕೃಷಿಕರಿಗೆ ತಿಳಿಸಿ ಕೊಡುವ ಸಲುವಾಗಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದಲೇ ಜಿಲ್ಲೆಯ ರೈತರಿಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಕೃಷಿ ಮೇಳಕ್ಕೆ ಆಗಮಿಸಿರುವ ರೈತರು ಇದರ ಬಗ್ಗೆ ಕುತೂಹಲ ತೋರಿಸಿದ್ದು, ಜಲಕೃಷಿಯ ಕುರಿತಂತೆ ಸಲಹೆ, ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಪ್ರಯೋಜನ: ಈ ಮೇವನ್ನು ಬೆಳೆಯುವುದರಿಂದ ಹೈನುಗಾರರಿಗೆ ಸಿಗುವ ಪ್ರಮುಖ ಲಾಭ ಕಡಿಮೆ ಜಾಗದಲ್ಲಿ ಈ ಮೇವನ್ನು ಉತ್ಪಾದಿಸಬಹುದು. ಅದರ ಜತೆಗೆ ಹೆಚ್ಚಿನ ನೀರಿನ ಅಗತ್ಯವೂ ಇಲ್ಲ. ಬೇಸಗೆಯಲ್ಲೂ ಈ ಬೆಳೆಯನ್ನು ಬೆಳೆಸಿ, ಆ ಕಾಲದಲ್ಲಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಬಹುದು. ಕಡಿಮೆ ಅವಧಿಯಲ್ಲಿ ಈ ಜಲಕೃಷಿಯಲ್ಲಿ ಮೇವು ಮೇವು ಬೆಳೆ ಉತ್ಪಾದನೆ ಆಗುವುದರಿಂದ ತ್ವರಿತಗತಿಯಲ್ಲಿ ಮೇವು ಸಿಗಲಿದೆ. ದನಗಳಿಗೆ ಈ ಮೇವನ್ನು ಆಹಾರವಾಗಿ ಕೊಡುವುದರಿಂದ ಪೌಷ್ಠಿಕಾಂಶಯುಕ್ತ ಹಾಲು ಸಿಗಲಿದೆ.

share
ಬಿ.ಬಿ. ಶೆಟ್ಟಿಗಾರ್
ಬಿ.ಬಿ. ಶೆಟ್ಟಿಗಾರ್
Next Story
X