Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 20 ಅತ್ಯುತ್ತಮ ವಿವಿಗಳಿಗೆ 10,000...

20 ಅತ್ಯುತ್ತಮ ವಿವಿಗಳಿಗೆ 10,000 ಕೋ.ರೂ.ನೆರವು,ಸ್ವಾಯತ್ತತೆ: ಪ್ರಧಾನಿ ಘೋಷಣೆ

ವಾರ್ತಾಭಾರತಿವಾರ್ತಾಭಾರತಿ14 Oct 2017 10:01 PM IST
share
20 ಅತ್ಯುತ್ತಮ ವಿವಿಗಳಿಗೆ 10,000 ಕೋ.ರೂ.ನೆರವು,ಸ್ವಾಯತ್ತತೆ: ಪ್ರಧಾನಿ ಘೋಷಣೆ

ಪಾಟ್ನಾ,ಅ.14: ಜಾಗತಿಕವಾಗಿ ಸ್ಪರ್ಧಿಸಲು ಮತ್ತು ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಸೇರುವಂತಾಗಲು 10 ಖಾಸಗಿ ಮತ್ತು 10 ಸರಕಾರಿ ಸೇರಿದಂತೆ ದೇಶದಲ್ಲಿಯ 20 ವಿಶ್ವವಿದ್ಯಾನಿಲಯಗಳಿಗೆ 10,000 ಕೋ.ರೂ.ಗಳ ಆರ್ಥಿಕ ನೆರವು ಮತ್ತು ಸ್ವಾಯತ್ತತೆ ಯನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ ಘೋಷಿಸಿದರು.

ಭಾರತದ ಏಳನೆಯ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವಾಗಿರುವ ಪಾಟ್ನಾ ವಿವಿಯ ಶತಾಬ್ದಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ವಿಶ್ವದ ಅಗ್ರ 500 ವಿವಿಗಳ ಪಟ್ಟಿಯಲ್ಲಿ ಭಾರತದ ಯಾವುದೇ ಶಿಕ್ಷಣ ಸಂಸ್ಥೆಯು ಸೇರಿಲ್ಲ ಎಂದು ವಿಷಾದಿಸಿದರು.

 ಇದು ನಮಗೆ ಕಳಂಕವಲ್ಲವೇ? ನಲಂದಾ, ವಿಕ್ರಮಶಿಲಾದಂತಹ ಖ್ಯಾತ ಶಿಕ್ಷಣ ಸಂಸ್ಥೆಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಟಿಯಿಲ್ಲದ ಪರಂಪರೆಯನ್ನು ಮೆರೆದಿದ್ದ ಈ ದೇಶದಲ್ಲಿ ಸ್ಥಿತಿಯು ಬದಲಾಗಬಾರದೇ ಎಂದು ಪ್ರಶ್ನಿಸಿದ ಅವರು, ಐದು ವರ್ಷಗಳ ಅವಧಿಗೆ 10 ಖಾಸಗಿ ಮತ್ತು 10 ಸರಕಾರಿ ವಿವಿಗಳಿಗೆ 10,000 ಕೋ.ರೂ.ಗಳ ಆರ್ಥಿಕ ನೆರವನ್ನು ನಾವು ಒದಗಿಸುತ್ತೇವೆ. ವಿಶ್ವದರ್ಜೆಯ ಶಿಕ್ಷಣಸಂಸ್ಥೆಗಳಾಗುವ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದು ಈ ವಿವಿಗಳು ಮಾಡಬೇಕಾದ ಕಾರ್ಯವಾಗಲಿದೆ ಎಂದು ಪ್ರಕಟಿಸಿದರು.

ಈ ವಿವಿಗಳನ್ನು ಪ್ರಧಾನಿ, ಮುಖ್ಯಮಂತ್ರಿ ಅಥವಾ ಬೇರೆ ಯಾರಾದರೂ ಆಯ್ಕೆ ಮಾಡುವುದಿಲ್ಲ. ಈ ಕಾರ್ಯವನ್ನು ವಿಶೇಷ ಸಮಿತಿಯೊಂದು ಪಾರದರ್ಶಕವಾಗಿ ನಿರ್ವಹಿಸಲಿದೆ ಎಂದ ಅವರು, ತಮ್ಮ ಶಿಕ್ಷಣ ಸಂಸ್ಥೆಗಳು ಸವಾಲನ್ನು ಎದುರಿಸಲು ಸಜ್ಜಾಗುವಂತೆ ಮಾಡುವಲ್ಲಿ ರಾಜ್ಯ ಸರಕಾರಗಳೂ ಮಹತ್ವದ ಪಾತ್ರವನ್ನು ಹೊಂದಲಿವೆ ಎಂದರು.

ಜನರ ಭಾವನೆಗಳು ಮತ್ತು ಬೇಡಿಕೆಗಳನ್ನು ಪರಿಗಣಿಸಿ ಪಾಟ್ನಾ ವಿವಿಗೆ ಕೇಂದ್ರೀಯ ವಿವಿಯ ಸ್ಥಾನಮಾನವನ್ನು ನೀಡುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ತನ್ನ ಭಾಷಣದಲ್ಲಿ ಆಗ್ರಹಿಸಿದ ಕೆಲವೇ ಕ್ಷಣಗಳ ಬಳಿಕ ತನ್ನ ಭಾಷಣದಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ತಾನು ಪಾಟ್ನಾ ವಿವಿಯನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೊಯ್ಯಲು ಬಯಸಿರುವುದಾಗಿ ತಿಳಿಸಿದರು.

ಸವಾಲನ್ನು ಸ್ವೀಕರಿಸುವಂತೆ ಪಾಟ್ನಾ ವಿವಿ ಮತ್ತು ಭಾರತದ ಎಲ್ಲ ವಿವಿಗಳಿಗೆ ಆಹ್ವಾನದೊಂದಿಗೆ ತಾನು ಇಲ್ಲಿಗೆ ಬಂದಿದ್ದೇನೆ. ಇದು ಕೇಂದ್ರಿಯ ವಿವಿ ಸ್ಥಾನಮಾನವು ನೀಡುವುದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ ಎನ್ನುವ ಮೂಲಕ ಅವರು ನಿತೀಶ ಬೇಡಿಕೆಯನ್ನು ಪಕ್ಕಕ್ಕೆ ಸರಿಸಿದರು.

 ತಮ್ಮ ಬೆಳವಣಿಗೆಗಾಗಿ ಹಳೆಯ ವಿದ್ಯಾರ್ಥಿಗಳ ದಕ್ಷತೆ, ಸಾಮರ್ಥ್ಯವನ್ನು ಬಳಸಿಕೊಳ್ಳು ವಂತೆ ಇದೇ ಸಂದರ್ಭದಲ್ಲಿ ಮೋದಿ ವಿವಿಗಳಿಗೆ ಸೂಚಿಸಿದರು.

ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದಾಗಿ ಭಾರತವು ಹಾವಾಡಿಗರ ಮತ್ತು ಮಾಟಗಾರರ ದೇಶವೆಂಬ ಜಾಗತಿಕ ಅಭಿಪ್ರಾಯ ಬದಲಾಗಿದೆ. ಒಂದು ದೇಶವಾಗಿ ನಾವಿಂದು ‘ಸ್ನೇಕ್’ನಿಂದ ‘ವೌಸ್’ಗೆ ಸಾಗಿದ್ದೇವೆ ಎಂದು ಅವರು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಬದಲಾಗುತ್ತಿರುವ ಅಗತ್ಯಗಳೊಂದಿಗೆ ಹೊಸತನವು ಮುಖ್ಯ ಪಾತ್ರವನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಅವರು, ವಿವಿಗಳು ಹೊಸತನಗಳಿಗೆ ತೆರೆದುಕೊಳ್ಳಬೇಕು. ಕೇಂದ್ರೀಯ ವಿವಿಯು ಹಳೆಯ ಮಾತಾಯಿತು. ಸಂದೇಶವೀಗ ಸ್ಪಷ್ಟವಿದೆ, ಸಾಧನೆಯು ಆರ್ಥಿಕ ನೆರವನ್ನು ನಿರ್ಧರಿಸುತ್ತದೆ ಎಂದರು.

ಹಿಂದಿನ ಸರಕಾರಕ್ಕೆ ಪ್ರಮುಖ ಬದಲಾವಣೆಗಳನ್ನು ತರಲು ಇಚ್ಛಾಶಕ್ತಿಯ ಕೊರತೆಯಿತ್ತು. ಆದರೆ ಈ ಸರಕಾರವು ಆ ಎದೆಗಾರಿಕೆಯನ್ನು ತೋರಿಸಿದೆ ಎಂದು ಪ್ರಧಾನಿ ನುಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X