ಕುರ್ಚಿಗೆ ಕಟ್ಟಿ ಹಾಕಿ ಪೊಲೀಸ್‌ಗೆ ಥಳಿತ

ಶ್ರೀನಗರ , ಅ. 14: ಮಹಿಳೆಯೋರ್ವಳ ಚಿತ್ರ ಸೆರೆ ಹಿಡಿದ ಆರೋಪದಲ್ಲಿ ಪೊಲೀಸ್ ಒಬ್ಬರನ್ನು ಕುರ್ಚಿಗೆ ಕಟ್ಟಿ ಹಾಕಿ ಥಳಿಸಿದ ಘಟನೆ ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದಿದೆ.
ಶ್ರೀನಗರದಿಂದ 40 ಕಿ.ಮೀ. ದೂರದಲ್ಲಿರುವ ರಾಜ್ಯದ ಪಶ್ಚಿಮ ವಲಯದ ಗಂದೇಬಾಲ್ ಜಿಲ್ಲೆಯಲ್ಲಿ ಶನಿವಾರ ಘಟನೆ ನಡೆದಿದೆ.
ಮಹಿಳೆಯ ಚಿತ್ರ ಸೆರೆ ಹಿಡಿದ ಆರೋಪದಲ್ಲಿ ಪೊಲೀಸ್‌ನನ್ನು ಉದ್ರಿಕ್ತ ಗುಂಪು ವಶಕ್ಕೆ ಪಡೆಯಿತು ಹಾಗೂ ಅವರ ವಿರುದ್ಧ ಘೋಷಣೆಗಳನ್ನು ಕೂಗಿತು. ಈ ಸಂದರ್ಭ ತೆಗೆದ ವೀಡಿಯೊ ಆನ್‌ಲೈನ್‌ನಲ್ಲಿ ಶೇರ್ ಆಗುತ್ತಿದೆ.
ಪೊಲೀಸ್‌ನನ್ನು ಅಮಾನತುಗೊಳಿಸಲಾಗಿದೆ ಹಾಗೂ ತನಿಖೆಗೆ ಆದೇಶಿಸಲಾಗಿದೆ.
ಈ ಘಟನೆಯನ್ನು ಪ್ರೇಕ್ಷಕನೋರ್ವ ವೀಡಿಯೊ ಮಾಡಿದ್ದಾರೆ. ಈ ವೀಡಿಯೊದಲ್ಲಿ ಫೋಟೊ ಸೆರೆ ಹಿಡಿದಿರುವುದಕ್ಕೆ ಮಹಿಳೆ ಪೊಲೀಸನಿಗೆ ಬಯ್ಯುವುದು, ಮಹಿಳೆ ಪೊಲೀಸ್‌ನನ್ನು ಕೆಲವು ವ್ಯಕ್ತಿಗಳ ಸಹಕಾರದಿಂದ ಕುರ್ಚಿಗೆ ಕಟ್ಟಿ ಥಳಿಸುತ್ತಿರುವುದು ಹಾಗೂ ಇತರ ಹಲವರು ಸುತ್ತುಗಟ್ಟಿ ನಿಂತು ಘೋಷಣೆಗಳನ್ನು ಕೂಗುತ್ತಿರುವುದು ದಾಖಲಾಗಿದೆ.
Next Story





