ಮಹಿಳೆಯರಿಗೆ ಅವಕಾಶ ನೀಡಿದರೆ, ಶಬರಿಮಲೆ ಸೆಕ್ಸ್ ಟೂರಿಸಂನ ಕೇಂದ್ರವಾಗಲಿದೆ
ಕೇರಳ ದೇವಾಲಯಗಳ ಮಂಡಳಿಯ ಮುಖ್ಯಸ್ಥರ ಹೇಳಿಕೆ

ಶಬರಿಮಲೆ, ಅ. 14: ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿದರೆ, ಶಬರಿಮಲೆ ಸೆಕ್ಸ್ ಟೂರಿಸಂನ ಕೇಂದ್ರವಾಗಲಿದೆ ಎಂದು ಕೇರಳ ದೇವಾಲಯಗಳ ಮಂಡಳಿಯ ಮುಖ್ಯಸ್ಥರು ಹೇಳಿದ್ದಾರೆ.
ಶಬರಿಮಲೆಗೆ 10ರಿಂದ 50 ವರ್ಷದ ಒಳಗಿನ ಮಹಿಳೆಯರ (ಮುಟ್ಟಿನ ವಯಸ್ಸಿನ ಮಹಿಳೆಯರು) ಪ್ರವೇಶವನ್ನು ಸಾಂಪ್ರದಾಯಿಕವಾಗಿ ನಿಷೇಧಿಸಲಾಗಿದೆಯೇ? ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ನ ಐವರು ಸದಸ್ಯರ ಪೀಠ ಹೇಳಿದ ಬಳಿಕ ಈ ಹೇಳಿಕೆ ಹೊರಬಿದ್ದಿದೆ. ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಿದರೆ, ಅದು ಥಾಯ್ಲೆಂಡ್ ನಂತೆ ಸೆಕ್ಸ್ ಟೂರಿಸಂನ ಕೇಂದ್ರವಾಗಲಿದೆ ಎಂದು ಪ್ರಯಾರ್ ಗೋಪಾಲಕೃಷ್ಣನ್ ಅವರು ಹೇಳಿದ್ದಾರೆ.
ಮಹಿಳೆಯರಿಗೆ ಅವಕಾಶ ನೀಡುವುದರಿಂದ ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡಿದಂತಾಗುತ್ತದೆ ಹಾಗೂ ಮಹಿಳೆಯರ ಸುರಕ್ಷೆಯ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಯಾರ್ ಗೋಪಾಲಕೃಷ್ಣನ್ ಅವರ ಹೇಳಿಕೆ ಬಗ್ಗೆ ಕಟುವಾಗಿ ಟೀಕಿಸಿರುವ ಕೇರಳದ ಸಚಿವ ಸುರೇಂದ್ರನ್, ಈ ರೀತಿಯ ಮೂರ್ಖತನದ ಹೋಲಿಕೆ ಹೇಗೆ ಸಾಧ್ಯವಾಗುತ್ತದೆ ಎಂದು ನನಗೆ ತಿಳಿಯುತ್ತಿಲ್ಲ. ಅವರು ಮಹಿಳೆಯರು ಹಾಗೂ ದೇವಾಲಯಕ್ಕೆ ಅವಮಾನ ಮಾಡಿದ್ದಾರೆ. ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಕ್ಷಮೆ ಯಾಚಿಸಬೇಕು ಎಂದಿದ್ದಾರೆ.







