2019ರಿಂದ ಸೇನೆಗೆ ಮದ್ದುಗುಂಡು ದೇಶದಲ್ಲೇ ಉತ್ಪಾದನೆ: ಸುಭಾಷ್ ಭಾಮ್ರೆ

ಹೊಸದಿಲ್ಲಿ, ಅ. 15: ಸೇನೆಗೆ 2019ರ ಬಳಿಕ ಪೂರೈಕೆಯಾಗಲಿರುವ ಮದ್ದುಗುಂಡುಗಳು ಭಾರತದಲ್ಲಿ ಉತ್ಪಾದಿಸಿದ್ದಾಗಿರಲಿದೆ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಶ್ ಭಾಮ್ರೆ ತಿಳಿಸಿದ್ದಾರೆ.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಮ್ರೆ, ದೇಶ ಸ್ವಾವಲಂಬಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಪ್ರಯತ್ನಿಸುತ್ತಿದೆ ಎಂದರು. ನಮ್ಮ ಮುಖ್ಯ ಗುರಿ ಮೇಕ್ ಇನ್ ಇಂಡಿಯಾ. ಈ ಅಭಿಯಾನದ ಮೂಲಕ ರಕ್ಷಣಾ ಸಾಮಗ್ರಿ ಉತ್ಪಾದನೆಯಲ್ಲಿ ಕೂಡ ದೇಶ ಸ್ವಾವಲಂಬನೆ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.
ದೇಶೀ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ವಿದೇಶಗಳಿಂದ ತಂತ್ರಜ್ಞಾನ ಆಮದು ಮಾಡಿಕೊಂಡು ಜಂಟಿಯಾಗಿ ಉತ್ಪಾದಿಸುವ ಮೂಲಕ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು.
ಜಬಲ್‌ಪುರಕ್ಕೆ ಒಂದು ದಿನ ಭೇಟಿಗಾಗಿ ಆಗಮಿಸಿದ ಭಾಮ್ರೆ, ಕೇಂದ್ರ ಭದ್ರತಾ ಸಂಸ್ಥೆಗೆ ಆಗಮಿಸಿ ಪರಿಶೀಲನೆ ನಡೆಸಿದರು.
Next Story





