ಗಂಗಾ ನದಿ ಪುನರುಜ್ಜೀವನ: ಕ್ರಮಗಳ ವರದಿ ಸಲ್ಲಿಸಲು ಕೇಂದ್ರಕ್ಕೆ ಎನ್‌ಜಿಟಿ ನಿರ್ದೇಶ

ಹೊಸದಿಲ್ಲಿ, ಅ. 15: ಗೋಮುಖ್ ಹಾಗೂ ಉನ್ನಾವೊ ನಡುವಿನ ವ್ಯಾಪ್ತಿಯಲ್ಲಿ ಗಂಗಾ ನದಿ ಸ್ವಚ್ಛಗೊಳಿಸುವಂತೆ ತಾನು ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಫಿದಾವಿತ್ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕೇಂದ್ರ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ಸರಕಾರಕ್ಕೆ ನಿರ್ದೇಶಿಸಿದೆ.
ಉನ್ನಾವೊ ಹಾಗೂ ಹರಿದ್ವಾರದ ನಡುವಿನ ನದಿಯ ದಂಡೆಯಿಂದ 100 ಮೀಟರ್ ಪ್ರದೇಶವನ್ನು ಅಭಿವೃದ್ಧಿ ಕೈಗೊಳ್ಳಬಾರದ ಪ್ರದೇಶ ಎಂದು ಘೋಷಿಸಿದೆ ಹಾಗೂ ನದಿಯಿಂದ 500 ಮೀಟರ್ ಒಳಗಡೆ ತ್ಯಾಜ್ಯ ಎಸೆಯುವುದನ್ನು ನಿಷೇಧಿಸಿ ಹಸಿರು ನ್ಯಾಯಾಧೀಕರಣ ತೀರ್ಪು ನೀಡಿದೆ.
ಕಾನ್ಪುರದಿಂದ ಉತ್ತರಪ್ರದೇಶ ಗಡಿ ವರೆಗಿನ ಹಂತ-2ಕ್ಕೆ ಸಂಬಂಧಿಸಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂಬುದನ್ನು ತಿಳಿಸಿ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತರ್ ಕುಮಾರ್ ನೇತೃತ್ವದ ಪೀಠ ಎಲ್ಲ ಶೇರುದಾರರನ್ನು ಪ್ರಶ್ನಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ನಿಗದಿ ಮಾಡಲಾಗಿದೆ.
Next Story





