ಮಾಡಾವು: ಮುಅಲ್ಲಿಂ ಡೇ, ಪ್ರಾರ್ಥನ ಸಂಗಮ
ಮಾಡಾವು, ಅ. 15: ನುಸ್ರತುಲ್ ಇಸ್ಲಾಂ ಎಸ್ಕೆ ಎಸ್ ಬಿ ವಿ ಮದ್ರಸ ಮಾಡಾವು ಇದರ ವತಿಯಿಂದ ಮುಅಲ್ಲಿಂ ಡೇ ಹಾಗೂ ಪ್ರಾರ್ಥನ ಸಂಗಮ ನಡೆಯಿತು.
ಬದ್ರಿಯಾ ಜುಮಾ ಮಸ್ಜಿದ್ ಮಾಡಾವು ಖತೀಬ್ ಶಮೀರ್ ದಾರಿಮಿ ದುಆಶಿರ್ವಚನ ನೀಡಿ ಶಾಫಿ ಸ್ವಾಲಿಹ್ ಮೌಲವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂಬ್ರ ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್ ಪ್ರಾಸ್ಥವಿಕ ಭಾಷಣ ಮಾಡಿದರು.
ಶಂಸುಲ್ ಉಲಮಾ ವಿಂಗ್ಸ್ ಮಾಡಾವು ವತಿಯಿಂದ ಮುಅಲ್ಲಿಮರಿಗೆ ಸನ್ಮಾನಿಸಲಾಯಿತು. ಬಿ.ಜೆ.ಎಂ ಅಧ್ಯಕ್ಷ ಹುಸೈನಾರ್ ಸಂತೋಷ್, ಕಾರ್ಯದರ್ಶಿ ಅಬ್ದುಲ್ ಹಮೀದ್ ಫ್ಯಾಮಿಲಿ, ಖಾಲಿದ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಎಂ ಎ ಹನೀಫ್ ಮುಸ್ಲಿಯಾರ್ ಸ್ವಾಗತ ಭಾಷಣ ಮಾಡಿದರು.
Next Story