ರಾಷ್ಟ್ರೀಯ ಹೆದ್ದಾರಿಯ 28 ಕಡೆಗಳಲ್ಲಿ ಸ್ಕೈ ವಾಕರ್ ನಿರ್ಮಾಣ

ಉಡುಪಿ, ಅ.15: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವ ಜನಿಕರು ರಸ್ತೆ ದಾಟಲು ಅನುಕೂಲವಾಗುವಂತೆ ಒಟ್ಟು 28 ಕಡೆಗಳಲ್ಲಿ ಪಾದಾ ಚಾರಿ ಮೇಲ್ಸೆತುವೆ(ಸ್ಕೈ ವಾಕರ್)ಗಳನ್ನು ನಿರ್ಮಿಸುವ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲು ಪ್ರಸ್ತಾವನೆ ಯನ್ನು ಸಿದ್ಧಪಡಿಸಿದೆ.
ಹೆಜಮಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಟ ಪಾಡಿ ಜಂಕ್ಷನ್, ಪೊಲಿಪು ಜಂಕ್ಷನ್, ಉಚ್ಚಿಲ ಜಂಕ್ಷನ್, ಪಡುಬಿದ್ರೆ ಜಂಕ್ಷನ್, ಅಂಬಲಪಾಡಿ ಜಂಕ್ಷನ್, ಸಂತೆಕಟ್ಟೆ ಜಂಕ್ಷನ್, ಉದ್ಯಾವರ ಬಲಾಯಿಪಾದೆ ಜಂಕ್ಷನ್, ಕೋಟ ಹೈಸ್ಕೂಲ್, ಕೋಟ ಬಸ್ ನಿಲ್ದಾಣ, ಸಾಲಿ ಗ್ರಾಮ ಗುರು ನರಸಿಂಹ ದೇವಸ್ಥಾನ, ಬ್ರಹ್ಮಾವರ ಬಸ್ ನಿಲ್ದಾಣ, ಆಕಾಶ ವಾಣಿ, ಎಸ್‌ಎಂಎಸ್ ಕಾಲೇಜು, ಶಿರೂರು ಕೆಳಪೇಟೆ ಜಂಕ್ಷನ್, ಯಡ್ತರೆ ಹೊಸ ಬಸ್ ನಿಲ್ದಾಣ, ಬೈಂದೂರು ಜಂಕ್ಷನ್, ಉಪ್ಪುಂದ ಶಾಲೆಬಾಗಿಲು, ಕಂಬದಕೋಣೆ ಜಂಕ್ಷನ್, ಅರೆಹೊಳೆ ಜಂಕ್ಷನ್, ಆರಾಟೆ ಜಂಕ್ಷನ್, ಮುಲ್ಲಿಕಟ್ಟೆ ಜಂಕ್ಷನ್, ತ್ರಾಸಿ ಜಂಕ್ಷನ್, ತ್ರಾಸಿ ಬೀಚ್ ರಸ್ತೆ, ಮಾರಸ್ವಾಮಿ ದೇವಸ್ಥಾನ ಪ್ರದೇಶದಲ್ಲಿ ಪಾದಾಚಾರಿ ಮೇಲ್ಸೇತುವೆ ನಿರ್ಮಿಸುವಂತೆ ಸೂಚಿಸಲಾಗಿದೆ.
ಅದೇ ರೀತಿ ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ಮಣಿಪಾಲ ಟೈಗರ್ ಸರ್ಕಲ್, ಸಿಂಡಿಕೇಟ್ ಸರ್ಕಲ್, ಎಂಐಟಿ ಸರ್ಕಲ್, ಕುಂಜಿಬೆಟ್ಟು ಎಂಜಿಎಂ ಕಾಲೇಜು ಪ್ರದೇಶದಲ್ಲಿ ಪಾದಾಚಾರಿ ಮೇಲ್ಸೇತುವೆ ನಿರ್ಮಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಪ್ರಾಧಿಕಾರವು ಕಾಪು ಮುಖ್ಯಪೇಟೆ, ಕರಾವಳಿ ಜಂಕ್ಷನ್, ಬ್ರಹ್ಮಾವರ ಜಂಕ್ಷನ್, ಕೋಟ ಜಂಕ್ಷನ್, ಶಾಸ್ತ್ರೀ ಸರ್ಕಲ್, ಕಿರಿಮಂಜೇಶ್ವರಗಳಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಿದೆ.
‘ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಯಾಗುತ್ತಿದ್ದು, ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸ ಲಾಗಿದೆ. ಈಗಾಗಲೇ 28ಕಡೆಗಳಲ್ಲಿ ಪಾದಾಚಾರಿ ಮೇಲ್ಸೆತುವೆ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಿದ್ಧ ಪಡಿಸಲಾಗಿದ್ದು, ಇನ್ನು ಬೇರೆ ಕಡೆಗಳಲ್ಲಿ ಮೇಲ್ಸೆತುವೆ ನಿರ್ಮಿಸುವ ಬಗ್ಗೆ ಸಾರ್ವಜನಿಕರ ಬೇಡಿಕೆ ಇದ್ದರೆ ತಿಳಿಸಬಹುದು’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ.







