ದಲಿತ ಯುವತಿ ಮೇಲೆ ಜಾಟ್ ಯುವತಿಯರಿಂದ ಹಲ್ಲೆ

ಮುಝಾಫ್ಫರ್‌ನಗರ್ (ಯುಪಿ), ಅ. 15: ಮೇಲ್ಜಾತಿಯ ನಾಲ್ವರು ಯುವತಿಯರು ದಲಿತ ಯುವತಿಗೆ ಥಳಿಸಿದ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ನಡೆದಿದ್ದು, ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ದಲಿತ ಯುವತಿಯ ತಂದೆ ಮೇಲ್ಜಾತಿಯ ನಾಲ್ವರು ಯುವತಿಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರೆಲ್ಲರೂ ಜಾಟ್ ಜಾತಿಗೆ ಸೇರಿದ 12ನೇ ತರಗತಿ ವಿದ್ಯಾರ್ಥಿನಿಯರು ಎಂದು ಸರ್ಕಲ್ ಆಫೀಸರ್ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಪಾಚೆಂಡಾ ಗ್ರಾಮದಲ್ಲಿ ನಾಲ್ವರು ಯುವತಿಯರು ತನ್ನ ಪುತ್ರಿಗೆ ಥಳಿಸಿದ್ದಾರೆ ಎಂದು ದಲಿತ ಯುವತಿಯ ತಂದೆ ಕುಮಾರ್ ಹೇಳಿದ್ದಾರೆ. ಈ ನಡುವೆ ಆಕ್ರೋಶಿತರಾದ ಗ್ರಾಮದ ದಲಿತ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ ಹಾಗೂ ಪ್ರಕರಣದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





