Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ

ಓ ಮೆಣಸೇ

ಪಿ.ಎ.ರೈಪಿ.ಎ.ರೈ16 Oct 2017 12:40 AM IST
share
ಓ ಮೆಣಸೇ

ಹಿಂದುತ್ವ ಎನ್ನುವುದು ಭಾರತದ ಸಾಂಸ್ಕೃತಿಕ ಹೆಗ್ಗುರುತು - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ನಕಲಿ ಗೋರಕ್ಷಕರು ಬೀದಿಗಳಲ್ಲಿ ಕತ್ತಿ ತಲವಾರುಗಳ ಜೊತೆಗೆ ಆ ಗುರುತನ್ನು ಅಳಿಸಲು ಹೊರಟಿದ್ದಾರೆ.

--------------------

ರಾಜಕೀಯದಲ್ಲಿ ಧರ್ಮವಿರಬೇಕೇ ಹೊರತು, ಧರ್ಮದಲ್ಲಿ ರಾಜಕೀಯ ಬೆರೆಸಬಾರದು. -ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ

ಧರ್ಮದಲ್ಲೂ, ರಾಜಕೀಯದಲ್ಲೂ ವಿಷ ಬೆರೆಸುವ ನಿಮ್ಮಂಥವರ ಬಗ್ಗೆ ಜನರಿಗೆ ಭಯವಿದೆ.

---------------------

ಮಾಜಿ ಪ್ರಧಾನಿ ದೇವೇಗೌಡರನ್ನು ಬಿಟ್ಟು ಬೇರೆ ಯಾರಿಗೂ ನನ್ನನ್ನು ಟೀಕಿಸುವ ಅಧಿಕಾರವಿಲ್ಲ. -ಝಮೀರ್ ಅಹ್ಮದ್, ಶಾಸಕ

ಕಾಂಗ್ರೆಸ್ ಸೇರಿದ ಬೆನ್ನಿಗೇ ಕಾಂಗ್ರೆಸ್‌ನ ವರಿಷ್ಠರಿಗೆ ಸವಾಲೇ?

---------------------

ಸಿಎಂ ಸಿದ್ದರಾಮಯ್ಯರಿಗೆ ವಿನಾಶಕಾಲೇ ವಿಪರೀತ ಬುದ್ಧಿ. -ಯಡಿಯೂರಪ್ಪ, ಮಾಜಿ ಸಿಎಂ

ಬುದ್ಧಿ ವಿಪರೀತ ಇರುವುದು ಒಳ್ಳೆಯ ವಿಷಯವೇ ಆಗಿದೆ.

---------------------

ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿನವರು ಗೋಭಕ್ಷಕರು. -ಸಿ.ಟಿ. ರವಿ, ಶಾಸಕ

ವರ್ಷಗಳ ಕಾಲ ಆಸ್ಪತ್ರೆಯಲ್ಲ್ಲಿ ಕಳೆದ ಸದಾನಂದ ಗೌಡರನ್ನು ಹೀಗೆ ವ್ಯಂಗ್ಯ ಮಾಡುವುದೇ?

---------------------

ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವುದೇ ನನ್ನ ಮುಂದಿನ ಗುರಿ. -ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ

ಒಟ್ಟು ಸೊಸೆಗೆ ಪಾಠ ಕಲಿಸಲು ಮಗನನ್ನು ಸಾಯಿಸುವುದಕ್ಕೂ ತಾವು ಸಿದ್ಧರು.

---------------------

ಕಮ್ಯುನಿಸ್ಟರ ಸ್ವಭಾವದಲ್ಲೇ ರಾಜಕೀಯ ಹಿಂಸಾಚಾರ ಇದೆ. -ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಗಾಂಧಿಯನ್ನು ಕೊಂದದ್ದು ಕಮ್ಯುನಿಸ್ಟರೇ?

---------------------

ದೇಶದ ರಕ್ಷಣೆಗಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಕತ್ತಿ-ತಲ್ವಾರ್ ಇಟ್ಟುಕೊಳ್ಳಬೇಕು. -ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಮುಖಂಡ

ದೇಶ ರಕ್ಷಣೆಗಲ್ಲವಾದರೂ, ನಿಮ್ಮಂತಹವರಿಂದ ರಕ್ಷಣೆ ಪಡೆಯಲು ಕತ್ತಿ, ತಲವಾರು ಅತ್ಯಗತ್ಯ ಎನ್ನುವ ಸ್ಥಿತಿಯನ್ನು ಪೊಲೀಸರು ನಿರ್ಮಾಣ ಮಾಡುತ್ತಿದ್ದಾರೆ. 

---------------------

ಲೆಕ್ಕ ಪುಸ್ತಕ ಎರಡೆರಡಿದ್ದರೆ ಅಭಿವೃದ್ಧಿ ಅಸಾಧ್ಯ. -ಅರುಣ್ ಜೇಟ್ಲಿ, ಕೇಂದ್ರ ಸಚಿವ

ಆದರೆ ಅಮಿತ್ ಶಾ ಪುತ್ರ ಅದನ್ನು ಸಾಧ್ಯ ಮಾಡಿದ್ದಾರೆ.

---------------------

ಪ್ರಮೋದ್ ಮುತಾಲಿಕ್ ಒಬ್ಬ ದಾರಿಹೋಕ. -ರಮಾನಾಥ ರೈ, ಸಚಿವ

ನಾಡಿನ ಪಾಲಿಗೆ ಮಾರಿ ಹೋಕ.

---------------------

ಕಾಂಗ್ರೆಸ್ ಅಧ್ಯಕ್ಷರಾಗಲು ತಾಯಿ-ಮಗ (ಸೋನಿಯಾ, ರಾಹುಲ್) ಮಾತ್ರ ಅರ್ಹರು. -ಮಣಿ ಶಂಕರ್ ಅಯ್ಯರ್, ಕಾಂಗ್ರೆಸ್ ನಾಯಕ

ಪ್ರಧಾನಿಯಾಗಲು ಯಾರು ಅರ್ಹರು ಎನ್ನುವುದನ್ನೂ ಬಾಯಿ ಬಿಡಬಾರದೇ?

---------------------

ಪಕ್ಷ ಸಂಘಟನೆ ಕಡೆಗಣಿಸುವವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. -ದೇವೇಗೌಡ, ಮಾಜಿ ಪ್ರಧಾನಿ

ಹಾಗಾದರೆ ಸೂಟ್‌ಕೇಸ್ ಕೊಟ್ಟವರಿಗಷ್ಟೇ ಟಿಕೆಟ್ ಎಂದಾಯಿತು.

---------------------

ಉಗಿದು ಓಡುವಲ್ಲಿ ಕಾಂಗ್ರೆಸ್ ನಿಪುಣ. -ಅನಂತಕುಮಾರ್, ಕೇಂದ್ರ ಸಚಿವ

ಜನರು ನಿಮ್ಮನ್ನು ಹುಗಿದು ಬಿಡುವ ಮುನ್ನ ಓಡಿ ಬಿಡಿ.

---------------------

ಕನ್ನಡದಲ್ಲಿ ಮಂತ್ರ ಪಠಿಸಿದರೆ ದೇವರು ಸಿಟ್ಟಾಗುವುದಿಲ್ಲ. -ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಜನರಿಗೆ ಮಂತ್ರ ಅರ್ಥವಾದರೆ ದೇವರ ಬೆಲೆ ಎಲ್ಲಿ ಉಳಿಯಿತು?

---------------------

ನಮ್ಮದು ನುಡಿದಂತೆ ನಡೆದ ಸರಕಾರ. -ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಹಾಗೆಂದು ಕೆರೆಗಳನ್ನು ಬೆಂಗಳೂರು ರಸ್ತೆಗಳ ಮಧ್ಯೆ ತೆಗೆಯುವುದೇ?

---------------------

ಗಾಂಧಿ ಹತ್ಯೆಯಿಂದ ರಾಜಕೀಯವಾಗಿ ಲಾಭವಾಗಿದ್ದರೆ ಅದು ಕಾಂಗ್ರೆಸ್‌ಗೆ ಮಾತ್ರ. -ಉಮಾಭಾರತಿ, ಕೇಂದ್ರ ಸಚಿವೆ

ಕೊಂದ ಬಳಿಕ ನಿಮಗೆ ಅದು ಅರಿವಾಯಿತೇ?

---------------------

ಆರೆಸ್ಸೆಸ್‌ನಲ್ಲಿ ಮಹಿಳೆಯರ ಕಡೆಗಣನೆಯಾಗುತ್ತಿದೆ. -ರಾಹುಲ್‌ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ಮಹಿಳೆಯರು ಆರೆಸ್ಸೆಸ್ ಸೇರದೇ ಇರುವುದು ನಿಮ್ಮ ಚಿಂತೆಯೇ?

---------------------

ನಾವು ದೇಶಕ್ಕೆ ಮಾತನಾಡುವ ಪ್ರಧಾನಿಯನ್ನು ಕೊಟ್ಟಿದ್ದೇವೆ. -ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಮಾತನಾಡುವ ಗೊಂಬೆ.

---------------------

ಗೌರಿ ಲಂಕೇಶ್ ಹತ್ಯೆ ಕುರಿತು ಸುಳಿವು ಸಿಕ್ಕಿದೆ. -ರಾಮಲಿಂಗಾರೆಡ್ಡಿ, ಸಚಿವ

ಇನ್ನೂ ಗೌರಿ ಹತ್ಯೆಯಾಗಿರುವ ಸುಳಿವಿನ ಬಗ್ಗೆಯೇ ಹೇಳುತ್ತಿದ್ದೀರಿ. ಹತ್ಯೆ ಮಾಡಿದವರ ಸುಳಿವಿನ ಗತಿಯೇನು?

---------------------

ಪ್ರಧಾನಿ ಮೋದಿ 2030ಕ್ಕೆ ಚಂದ್ರನನ್ನೇ ಭೂಮಿಗೆ ತರುತ್ತಾರೆ. - ರಾಹುಲ್‌ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ಭೂಮಿಗೆ ತಂದರೆ ನೀವು ಆರಾಮವಾಗಿ ಅದರಲ್ಲಿ ಫುಟ್ ಬಾಲ್ ಆಡುತ್ತಾ ಕಾಲ ಕಳೆಯಬಹುದು.

---------------------

ದಿನಗಳು ಉರುಳಿದಂತೆ ಬಿಗ್‌ಬಾಸ್‌ನ ಆಕರ್ಷಣೆ ಹೆಚ್ಚುತ್ತಾ ಹೋಗುತ್ತಿದೆ. - ಸುದೀಪ್, ನಟ

ಆಕರ್ಷಣೆಗಾಗಿ ತಾನೆ ಕ್ಯಾಮರಾಗಳು ಬಿಸಿ ಬಿಸಿ ದೃಶ್ಯಗಳನ್ನು ಹೊರಬಿಡುತ್ತಿರುವುದು.

---------------------

‘ನಮೋ’ ಎಂದರೆ ನಂಬಿಕೆಗೆ ಮೋಸ. -ರಮಾನಾಥ ರೈ, ಸಚಿವ

ನಂಬಿಕೆಗೆ ಮೋಸ ರಾಜಕಾರಣಿಗಳ ಜನ್ಮಸಿದ್ಧ ಹಕ್ಕು.

---------------------

ಹಿಂದೂ ಹಬ್ಬಗಳನ್ನು ಗುರಿಯಾಗಿಸಿ ಪಟಾಕಿ ನಿಷೇಧ ಮಾಡಲಾಗಿದೆ. -ಬಾಬಾ ರಾಮ್‌ದೇವ್, ಯೋಗಗುರು

ಪತಂಜಲಿ ಪಟಾಕಿ ಉತ್ಪಾದನೆಯ ಯೋಜನೆ ಇದೆಯೇ?

share
ಪಿ.ಎ.ರೈ
ಪಿ.ಎ.ರೈ
Next Story
X