ಯುವಶಕ್ತಿ ಪರಿಷತ್‍ನಿಂದ ನೂತನ ರೀತಿಯಲ್ಲಿ ವಿಶ್ವ ಮಾನಸಿಕ ದಿನಾಚರಣೆ

ಚಾಮರಾಜನಗರ,ಅ.16: ಚಾಮರಾಜನಗರದ ಯುವಶಕ್ತಿ ಪರಿಷತ್ ವತಿಯಿಂದ ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಕ್ಷೌರ ಸ್ನಾನ ಮಾಡಿಸಿ ಹೊಸ ಬಟ್ಟೆಯನ್ನು ತೊಡಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಚಾಮರಾಜನಗರದ ತಾಲ್ಲೂಕಿನ ತಹಸಿಲ್ದಾರ್ ಪುರಂದರ್ ಮಾನಸಿಕ ವ್ಯಕ್ತಿಗೆ ಸ್ನಾನಮಾಡಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಜೀವನ ಶೈಲಿಯನ್ನು ಬದಲಾದ ಕಾಲದಲ್ಲಿ ಹೊಂದಿಕೊಳ್ಳಲಾಗದೆ. ಮಾನಸಿಕ ಒತ್ತಡ ಖೀನ್ನತೆಯಿಂದ ಮಕ್ಕಳಿಂದ ಹಿರಿಯರವರೆಗೂ ಒಂದಲ್ಲ ಒಂದುರೀತಿ ಮಾನಸಿಕ ತೊಳಳಾಟದಲ್ಲಿ ಜೀವನವನ್ನು ನಡೆಸುತ್ತ ಬಳಲುತ್ತಿದ್ದಾರೆ. ಅದ್ದರಿಂದ ಮಾನಸಿಕ ದೂರವಾಗಲು ಉತ್ತಮ ಆಹಾರ, ಧ್ಯಾನ, ಯೋಗ, ಉತ್ತಮ ವಿಚಾರ ಆಚಾರಗಳನ್ನು ನಡೆಸಿಕೊಂಡು ಸರಳ ಜೀವನದಿಂದ ತೃಪ್ತಿನಡೆಸಬೇಕೆಂದು ತಿಳಿಸಿದರು.
ಯುವಶಕ್ತಿ ಪರಿಷತ್‍ನ ಅಧ್ಯಕ್ಷ ಮಾತನಾಡಿ ಸಮಾಜದಲ್ಲಿ ಹಿಂದೆ ಗುರುವಿಲ್ಲ ಮುಂದೆ ಗುರಿಇಲ್ಲ ಎಂಬಂತೆ ಮಕ್ಕಳು ಯುವಕರು ಸಂಭಂದಗಳು ಅವಿಭಕ್ತ ಕುಟುಂಬಗಳಿಂದ ದೂರವಾಗಿ ಸ್ವಾರ್ಥದ ಬದುಕಿನಲ್ಲಿ ಅಧಿಕಾರ ಅಂತಸ್ತು ವ್ಯಾಮೊಹದಿಂದ ಮಾನಸಿಕ ಒತ್ತಡದಲ್ಲಿ ಸೀಲುಕಿ ಹೊರಬಾರಲಾರದೆ ಒಂದ್ದಿಕೊಳ್ಳಲಾಗದೆ ಧರ್ಮ ಸಂಕಟದಲ್ಲಿ ಬದುಕುತ್ತಿದ್ದಾನೆ ಅದ್ದರಿಂದ ಮನೋ ವಿಜ್ಞಾನಿಗಳು ಮನೋ ವೈದ್ಯರುಸ ಹೊರ ಜಗತ್ತಿಗೆ ಬಂದು ಸಮಾಜದ ಸ್ವಾಥ್ಯವನ್ನು ಸರಿಪಡಿಸಲು ದಿಟ್ಟ ನಿರ್ಧಾರವನ್ನು ಕೈ ಗೊಂಡು ಪದವಿ ಪೂರ್ವ ಶಿಕ್ಷಣ ಮೂಲಕ ಮನಶಾಸ್ತ್ರ ವಿಜ್ಞಾನವನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮಾನಸಿಕ ಸೈರ್ಯ ಹಾಗೂ ಧೈರ್ಯ ತುಂಬಿ ಮನೋಬಲವನ್ನು ಹೆಚ್ಚಿಸಿ ಉತ್ತಮ ಜೀವನ ಶೈಲಿಯಲ್ಲಿ ಬದುಕುವ ರೀತಿಯನ್ನು ತಿಳಿಸಿಕೊಡುವುದರ ಮೂಲಕ ಸಮಾಜವನ್ನು ತಿದ್ದಲುಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ನಿವೇದಿತ, ಶ್ರೀಗಂದವೇದಿಕೆ ಅಧ್ಯಕ್ಷ ರವಿಚಂದ್ರ, ಜಿಲ್ಲಾಸ್ಪತ್ರೆ ಹೊರಗುತ್ತಿಗೆ ಸಂಘದ ಅಧ್ಯಕ್ಷ ಮಹೇಶ್,ಆಟೋಹಬೀದ್ ಹಾಗೂ ಇನ್ನು ಮುಂತದವರು ಇದ್ದರು.







