ಜನವರಿ 1ರಿಂದ ದ.ಕ. ಜಿಲ್ಲೆಯಲ್ಲಿ ‘ಇಂದಿರಾ ಕ್ಯಾಂಟೀನ್’ ಕಾರ್ಯಾರಂಭ
ಎಲ್ಲೆಲ್ಲಿ ಎಷ್ಟು ಕ್ಯಾಂಟೀನ್ ಗಳಿರಲಿವೆ.. ಇಲ್ಲಿದೆ ಮಾಹಿತಿ

ಮಂಗಳೂರು, ಅ.16: ಜನವರಿ 1ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಇಂದಿರಾ ಕ್ಯಾಂಟೀನ್ ಗಳು ತೆರೆಯಲಿವೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ 10 ಹೊಸ ಕ್ಯಾಂಟೀನ್ ಗಳು ಆರಂಭವಾಗಲಿದೆ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ 5, ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ 1, ಬಂಟ್ವಾಳ, ಪುತ್ತೂರು,. ಸುಳ್ಯ ಹಾಗು ಬೆಳ್ತಂಗಡಿಯಲ್ಲಿ ತಲಾ 1 ಕ್ಯಾಂಟೀನ್ ಗಳು ಆರಂಭವಾಗಲಿದೆ. 45 ಸಾವಿರದಿಂದ 1 ಲಕ್ಷ ಜನಸಂಖ್ಯೆ ಇರುವ ಕಡೆಗಳಲ್ಲಿ 500 ತಿಂಡಿ-ಊಟಗಳನ್ನು (ಬೆಳಗ್ಗೆ-500, ಮಧ್ಯಾಹ್ನ-500, ರಾತ್ರಿ-500) ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
Next Story





