ಸಿಪಿಎಂ ಗುಲ್ವಾಡಿ ಕರ್ಕಿ ಶಾಖೆ ಸಮ್ಮೇಳನ

ಕುಂದಾಪುರ, ಅ.16: ಸಿಪಿಐಎಂ ಪಕ್ಷದ ಗ್ರೀನ್ ಲ್ಯಾಂಡ್ ಕಾರ್ಖಾನೆ ಶಾಖಾ ಸಮ್ಮೇಳನವು ಗುಲ್ವಾಡಿ ಕರ್ಕಿ ಗ್ರಾಮದಲ್ಲಿ ಇತ್ತೀಚೆಗೆ ಜರಗಿತು.
ಸಮ್ಮೇಳನವನ್ನು ಉದ್ಘಾಟಿಸಿದ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮಹಾಬಲ ವಡೇರಹೋಬಳಿ ಮಾತನಾಡಿ, ಸಿಪಿಎಂ ಪಕ್ಷವು ಪ್ರತಿ ಮೂರು ವರ್ಷಕ್ಕೊಮ್ಮೆ ಕೆಳ ಸಮಿತಿಯಿಂದ ಮೇಲಿನ ಸಮಿತಿವರೆಗೆ ಪ್ರತಿ ಸಮಿತಿಗಳಿಗೆ ಪಕ್ಷದ ಸದಸ್ಯರಿಂದ ತನ್ನ ನಾಯಕತ್ವವನ್ನು ಆಯ್ಕೆ ಮಾಡಿ ಕೊಂಡು ಹೋರಾಟ ರೂಪಿಸುತ್ತದೆ ಎಂದು ಹೇಳಿದರು.
ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ದೇಶ ದಲ್ಲಿ ಶೋಷಿತರು, ಬಡವರು ಹಾಗೂ ಸಾಮಾನ್ಯ ಜನತೆಯ ನಡುವೆ ಸಿಪಿಎಂ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿದೆ. ದೇಶದ ಅಭಿವೃದ್ದಿ ಸಿಪಿಎಂನಿಂದ ಮಾತ್ರ ಸಾದ್ಯ ಎಂದು ತಿಳಿಸಿದರು.
ಸುಧಾಕರ ಧ್ವಜಾರೋಹಣ ನೆರವೇರಿಸಿದರು. ಸಂಜೀವ ಅಧ್ಯಕ್ಷತೆ ವಹಿಸಿ ದ್ದರು. ಪ್ರಕಾಶ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿಯನ್ನಾಗಿ ಪ್ರಕಾಶ ಅವರನ್ನು ಪುನರಾಯ್ಕೆ ಮಾಡಲಾಯಿತು.
Next Story





