ದಾಸ್ನಾ ಜೈಲಿನಿಂದ ಬಿಡುಗಡೆಗೊಂಡ ರಾಜೇಶ್, ನೂಪುರ್ ತಲ್ವಾರ್

ಗಾಝಿಯಾಬಾದ್, ಅ.16: ಆರುಷಿ-ಹೇಮರಾಜ್ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿ ನಾಲ್ಕು ವರ್ಷಗಳ ಬಳಿಕ ಕೊನೆಗೂ ದಾಸ್ನಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ನೊಯ್ಡಾದ ಜಲ್ವಾಯು ವಿಹಾರ್ ನಲ್ಲಿರುವ ಮನೆಗೆ ಹೊರಟ ತಲ್ವಾರ್ ದಂಪತಿಗೆ ಪೊಲೀಸರು ಭದ್ರತೆ ಒದಗಿಸಿದ್ದರು. ಜೈಲಿನ ಹೊರಭಾಗದ ರಸ್ತೆಯಲ್ಲಿ ಜನರು, ಮಾಧ್ಯಮದವರು ನೆರೆದಿದ್ದರು.
ಕೊಲೆ ಪ್ರಕರಣದಲ್ಲಿ ತನ್ನ ಕಕ್ಷಿದಾರರನ್ನು ಸಿಲುಕಿಸಲು ಸಂಚನ್ನು ಹೂಡಲಾಗಿತ್ತು ಎಂದು ತಲ್ವಾರ್ ದಂಪತಿಯ ಬಿಡುಗಡೆಯ ನಂತರ ಅವರ ವಕೀಲ ತನ್ವೀರ್ ಅಹ್ಮದ್ ಹೇಳಿದರು.
Next Story





