ವಶಪಡಿಸಿಕೊಂಡ 51 ಗೋವುಗಳನ್ನು ಮುಸ್ಲಿಮ್ ಕುಟುಂಬಕ್ಕೆ ಮರಳಿ ನೀಡಿ
ಗೋಶಾಲೆಗೆ ಆದೇಶಿಸಿದ ಜಿಲ್ಲಾಡಳಿತ

ಆಲ್ವಾರ್, ಅ.16: ಮುಸ್ಲಿಮ್ ಕುಟುಂಬದಿಂದ ಬಲವಂತವಾಗಿ ವಶಪಡಿಸಿಕೊಂಡ 51 ಗೋವುಗಳನ್ನು ಮರಳಿ ನೀಡುವಂತೆ ಆಲ್ವಾರ್ ಜಿಲ್ಲಾಡಳಿತ ಗೋಶಾಲೆಗೆ ಆದೇಶಿಸಿದೆ. ಗೋವುಗಳ ಮಾಲಕ ಸುಬ್ಬಾ ಖಾನ್ ವೃತ್ತಿಪರ ಹೈನುಗಾರ ಎಂದು ಕಿಶನ್ ಘರ್ ನ ಎಸ್ ಎಚ್ಒ ವರದಿ ನೀಡಿದ ಬಳಿಕ ಈ ಆದೇಶ ನೀಡಲಾಗಿದೆ.
ಖಾನ್ ಅವರ ವಿರುದ್ಧ ಈವರೆಗೆ ಅಕ್ರಮ ಗೋಸಾಗಾಟದ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ವರದಿ ಸಿಕ್ಕಿದ ಬಳಿಕ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸುಭಾಷ್ ಯಾದವ್ ಈ ಆದೇಶ ನೀಡಿದ್ದಾರೆ.
“ಸುಬ್ಬಾ ಖಾನ್ ಬಳಿ 60 ಹಸುಗಳು ಹಾಗು ಆಕಳುಗಳಿವೆ. ಅವರು ಗೋಹತ್ಯೆ ಮಾಡುತ್ತಿರಲಿಲ್ಲ ಎಂದು ಗ್ರಾಮಸ್ಥರು ಲಿಖಿತ ಮನವಿ ಸಲ್ಲಿಸಿದ್ದರು. ಅಕ್ಟೋಬರ್ 3ರಂದು ಪೊಲೀಸರ ಜೊತೆ ಬಂದಿದ್ದ ಕೆಲ ಮಂದಿ ಖಾನ್ ಅವರ 51 ಗೋವುಗಳನ್ನು ಬಲವಂತವಾಗಿ ಶ್ರೀ ಕೃಷ್ಣ ಗೋಶಾಲೆಗೆ ಸಾಗಿಸಿದ್ದರು” ಎಂದು ಯಾದವ್ ಹೇಳಿದ್ದಾರೆ.
Next Story





