ಕಾಂಗ್ರೆಸ್ ಗುಜರಾತ್ ಮತ್ತು ಅಭಿವೃದ್ಧಿಯ ವಿರೋಧಿಯಾಗಿದೆ: ಮೋದಿ ಟೀಕೆ

ಗಾಂಧಿನಗರ,ಅ.16: ಸೋಮವಾರ ಇಲ್ಲಿ ಬೃಹತ್ ರ‍್ಯಾಲಿಯೊಂದರಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅದು ಗುಜರಾತ್ ಮತ್ತು ಅಭಿವೃದ್ಧಿ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಗುಜರಾತ್ ಮತ್ತು ಗುಜರಾತಿಗಳನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ನ್ನು ತರಾಟೆಗೆತ್ತಿಕೊಂಡ ಅವರು, ಅದು ಸರ್ದಾರ್ ಪಟೇಲ್ ಮತ್ತು ಅವರ ಪುತ್ರಿ ಮಣಿಬೆನ್ ಅವರನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ, ಮಾಜಿ ಗುಜರಾತ್ ಮುಖ್ಯಮಂತ್ರಿಗಳಾದ ಬಾಬುಭಾಯಿ ಪಟೇಲ್ ಮತ್ತು ಮಾಧವಸಿನ್ಹ ಸೋಲಂಕಿಯವರಂತಹ ಇತರರಿಗೂ ನೆಹರು-ಗಾಂಧಿ ಕುಟುಂಬದಿಂದ ಅನ್ಯಾಯವಾಗಿತ್ತು ಎಂದರು.
ಮುಂದಿನ ಚುನಾವಣೆಯು ಅಭಿವೃದ್ಧಿ ಮತ್ತು ವಂಶವಾದದ ನಡುವಿನ ಹೋರಾಟ ವಾಗಲಿದೆ ಎಂದು ಹೇಳಿದ ಅವರು, ಕೋಮುವಾದ, ಜಾತೀಯತೆ ಮತ್ತು ಜನರನ್ನು ತಪ್ಪುದಾರಿಗೆ ಎಳೆಯುವುದು ಇವು ಕಾಂಗ್ರೆಸ್ ಪಕ್ಷದ ಚುನಾವಣಾ ಅಸ್ತ್ರಗಳಾಗಿವೆ ಎಂದು ಕುಟುಕಿದರು.
Next Story





