ಟ್ರಂಪ್ ನಿಲುವಿನ ಮೇಲೆ ಇಸ್ರೇಲ್, ಸೌದಿ ಪ್ರಭಾವ: ಇರಾನ್ ಆರೋಪ
ಟೆಹರಾನ್ (ಇರಾನ್), ಅ. 16: ಇಸ್ರೇಲ್ ಮತ್ತು ಸೌದಿ ಅರೇಬಿಯದ ಲಾಬಿಗಾರರ ಪ್ರಭಾವಕ್ಕೊಳಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿನ ತನ್ನ ಇರಾನ್ ವಿರೋಧಿ ಭಾಷಣ ಮಾಡಿದ್ದಾರೆ ಎಂದು ಇರಾನ್ ಸಂಸತ್ನ ಸ್ಪೀಕರ್ ಅಲಿ ಲರಿಜನಿ ಹೇಳಿದ್ದಾರೆ.
ಟ್ರಂಪ್ರ ಭಾಷಣವನ್ನು ಬರೆಯುವಲ್ಲಿ ಹಾಗೂ ಅವರಿಗೆ ಮಾರ್ಗದರ್ಶನ ನೀಡುವಲ್ಲಿ ಯಹೂದಿ ಆಡಳಿತ ಮತ್ತು ಸೌದಿ ಅರೇಬಿಯದಂಥ ಕೆಲವು ದೇಶಗಳು ಪ್ರಮುಖ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಲರಿಜನಿ ಹೇಳಿರುವುದಾಗಿ ಪ್ರೆಸ್ ಟಿವಿ ವರದಿ ಮಾಡಿದೆ.
ಟ್ರಂಪ್ರ ಆಕ್ರಮಣಕಾರಿ ಭಾಷಣವು ಗಲಭೆ ಉಂಟು ಮಾಡುವ ಹಾಗೂ ಇರಾನ್ನೊಂದಿಗಿನ ಅಂತಾರಾಷ್ಟ್ರೀಯ ಹಣಕಾಸು ಸಹಕಾರವನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.
Next Story