ಅಕ್ರಮ ಕಸಾಯಿಖಾನೆ ಬಗ್ಗೆ ಮಾಹಿತಿ ನೀಡಿದ ಮಹಿಳೆಗೆ ಹಲ್ಲೆ ನಡೆಸಿದ ಗುಂಪು

ಬೆಂಗಳೂರು. ಅ.16: ಅಕ್ರಮ ಕಸಾಯಿಖಾನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಮಹಿಳೆಯೊಬ್ಬರಿಗೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ನಂದಿನಿ ಅಕ್ರಮ ಕಸಾಯಿಖಾನೆಯೊಂದನ್ನು ಗಮನಿಸಿದ್ದು, ಈ ಬಗ್ಗೆ ತಳಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ತೆರಳುವಾಗ ನಂದಿನಿ ಕೂಡ ಜೊತೆಗೆ ತೆರಳಿದ್ದರು. ನಂತರ ಆ ಪ್ರದೇಶದೊಳಕ್ಕೆ ಹೋದಾಗ ಅಲ್ಲಿದ್ದ ಗುಂಪೊಂದು ನಂದಿನಿಯವರ ಕಾರಿನ ಮೇಲೆ ಕಲ್ಲೆಸೆದಿದೆ. ಈ ಸಂದರ್ಭ ನಂದಿನಿಯವರಿಗೂ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಾಗಿದೆ.
Next Story





