ಅತಿ ಕಿರಿಯ ಐರೋಪ್ಯ ನಾಯಕನಾಗಿ ಸೆಬಾಸ್ಟಿಯನ್
ವಿಯೆನ್ನಾ (ಆಸ್ಟ್ರಿಯ), ಅ. 16: ಆಸ್ಟ್ರಿಯದ ವಿದೇಶ ಸಚಿವ 31 ವರ್ಷದ ಸೆಬಾಸ್ಟಿಯನ್ ಕರ್ಝ್ ಯುರೋಪ್ನ ದೇಶವೊಂದನ್ನು ಮುನ್ನಡೆಸುವ ಅತಿ ಕಿರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.
ರವಿವಾರ ನಡೆದ ಚುನಾವಣೆಯಲ್ಲಿ ಅವರ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಯಾವುದೇ ಪಕ್ಷವು ಬಹುಮತ ಹೊಂದಿಲ್ಲವಾದರೂ, ಆಸ್ಟ್ರಿಯದ ಮುಂದಿನ ಚಾನ್ಸಲರ್ ಆಗಿ ಕರ್ಝ್ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಚುನಾವಣೆಯಲ್ಲಿ ಅವರ ಪೀಪಲ್ಸ್ ಪಾರ್ಟಿ 31.4 ಶೇಕಡ ಮತಗಳನ್ನು ಪಡೆದು ಮೊದಲ ಸ್ಥಾನದಲ್ಲಿದೆ.
Next Story