5 ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ
ಮಂಗಳೂರು, ಅ.16: ಜಿಲ್ಲೆಯ ವಿವಿಧ ತಾಲೂಕುಗಳ ಐದು ಗ್ರಾ.ಪಂ.ಗಲಿಗೆ ನೀಡಲಾದ ಗಾಂಧಿ ಗ್ರಾಮ ಪುರಸ್ಕಾರವನ್ನು ಜಿಲ್ಲಾ ಪಂಚಾಯತ್‌ನ ನೇತ್ರಾ ವತಿ ಭಾಂಗಣದಲ್ಲಿ ಹಸ್ತಾಂತರಿಸಲಾಯಿತು.
ಮಂಗಳೂರು ತಾ.ಪಂ.ನ ಪಡುಪಣಂಬೂರ, ಬಂಟ್ವಾಳದ ಸಂಗಬೆಟ್ಟು, ಬೆಳ್ತಂಗಡಿಯ ಕುವೆಟ್ಟು, ಪುತ್ತೂರಿನ ರಾಮಕುಂಜ ಹಾಗೂ ಸುಳ್ಯದ ಐವರ್ನಾಡು ಗ್ರಾಪಂಗಳಿಗೆ ಗಾಂಧಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಜಿ.ಪಂ. ಸಾಮಾನ್ಯ ಸಭೆಗೆ ಮುನ್ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಕೂಟದಲ್ಲಿ ಪದಕ ವಿಜೇತರಾಗಿರುವ ಭಾಗೀರಥಿ ರೈ ಹಾಗೂ ಜಿಲ್ಲಾ ವಾಲಿಬಾಲ್ ತರಬೇತುದಾರ ನಾರಾಯಣ ಆಳ್ವ ಅವರನ್ನು ಕೂಡಾ ಸನ್ಮಾನಿಸಲಾಯಿತು.
Next Story





