ಎಸ್ಸೆಸ್ಸೆಫ್ ಕ್ಯಾಂಪಸ್ 'ಗಲ್ವನೈಸ್ ಕ್ಯಾಂಪ್' ಸಮಾರೋಪ

ಪುತ್ತೂರು, ಅ. 17: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನಡೆದ ಎಸ್ಸೆಸ್ಸೆಫ್ ಕ್ಯಾಂಪಸ್ 'ಗಲ್ವನೈಸ್ ಕ್ಯಾಂಪ್' ನ ಸಮಾರೋಪ ಸಮಾರಂಭವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅವರ ಅಧ್ಯಕ್ಷತೆಯಲ್ಲಿ ಕೆ.ಜಿ.ಎನ್. ಮಿತ್ತೂರಿನಲ್ಲಿ ನಡೆಯಿತು.
ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ರಫೀಕ್ ಸಖಾಫಿ ಚೆರಿಯಪರಂಬು ಹಾಗೂ ಮುಸ್ತಫ ನಹೀಮಿ ಸಂಘಟನಾ ತರಗತಿಗಳನ್ನು ನಡೆಸಿದರು. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿಗಳು 6 ತಿಂಗಳ ಯೋಜನೆಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕ ಶಾಕಿರ್ ಹಾಜಿ ಮಿತ್ತೂರು, ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ, ರಾಜ್ಯ ಇಹ್ಸಾನ್ ಸಮಿತಿ ಸದಸ್ಯ ಅಲ್ತಾಫ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ, ವಂದಿಸಿದರು.





