ಬೆಂಗಳೂರು: ಅ.26ರಂದು ಉದ್ಯೋಗ ಮೇಳ
ಬೆಂಗಳೂರು, ಅ.17: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಖಾಸಗಿ ನಿಯೋಜಕರ ಸಂಯುಕ್ತ ಆಶ್ರಯದಲ್ಲಿ ನಿರುದ್ಯೋಗ ಯುವಕ, ಯುವತಿಯರಿಗೆ ನೇರ ಸಂದರ್ಶನಕ್ಕೆ ಅನುಕೂಲವಾಗುವಂತೆ ಅ.26ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ನಗರದ ನೃಪತುಂಗ ರಸ್ತೆಯಲ್ಲಿರುವ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಖಾಸಗಿ ವಲಯದ 40ಕ್ಕೂ ಹೆಚ್ಚು ಹೆಸರಾಂತ ಸಂಸ್ಥೆಗಳು ಭಾಗವಹಿಸುತ್ತಿದ್ದು, ವಿವಿಧ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸ್ಥಳದಲ್ಲೆ ನೇರವಾಗಿ ಆಯ್ಕೆ ಮಾಡಲಿದ್ದಾರೆ.
ಅಕ್ಷರಸ್ಥರು, ಅರ್ಧದಲ್ಲಿಯೆ ಶಾಲೆ ಬಿಟ್ಟವರು ಹಾಗೂ ಎಸೆಸೆಲ್ಸಿ ಅನುತ್ತೀರ್ಣ, ಎಸೆಸೆಲ್ಸಿ ಉತ್ತೀರ್ಣ, ಪಿಯುಸಿ, ಐಟಿಐ ಮತ್ತು ಡಿಪ್ಲೊಮಾ(ಎಲ್ಲಾ ಟ್ರೇಡ್‌ಗಳು) ಮತ್ತು ಪದವೀಧರರು ಹಾಗೂ ಸ್ನಾತಕೋತ್ತರ ಪದವಿ ಹೊಂದಿದವರಿಗೆ ಉದ್ಯೋಗ ಅವಕಾಶಗಳು ಲಭ್ಯವಿದೆ.
ಉದ್ಯೋಗಾಕಾಂಕ್ಷಿಗಳು ತಮ್ಮ ವೈಯಕ್ತಿಕ(ಬಯೋಡಾಟಾ) ವಿವರಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ದೊರೆಯುವ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 22289668, 22261184, 22374582, 22268846 ಹಾಗೂ 22259351 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.







