ಭ್ರಷ್ಟಾಚಾರ ಪ್ರಕರಣ: ಟೈಟ್ಲರ್ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

ಹೊಸದಿಲ್ಲಿ,ಅ.17: ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪಗಳನ್ನು ರೂಪಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಜಗದೀಶ ಟೈಟ್ಲರ್ ಮತ್ತು ವಿವಾದಾತ್ಮಕ ಉದ್ಯಮಿ ಅಭಿಷೇಕ್ ವರ್ಮಾ ಸಲ್ಲಿಸಿದ್ದ ಅರ್ಜಿಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.
2009ರಲ್ಲಿ ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರ ಹೆಸರಿಗೆ ನಕಲಿ ಪತ್ರವೊಂದನ್ನು ಬರೆದಿದ್ದ ಆರೋಪದಲ್ಲಿ ದಿಲ್ಲಿಯ ನ್ಯಾಯಾಲಯವೊಂದು ಟೈಟ್ಲರ್ ಮತ್ತು ವರ್ಮಾ ಅವರ ವಿಚಾರಣೆ ನಡೆಸುತ್ತಿದೆ. ಮನಮೋಹನ್ ಸಿಂಗ್ ಅವರ ವಿಳಾಸಕ್ಕೆ ಬರೆಯಲಾಗಿದ್ದ ನಕಲಿ ಪತ್ರವನ್ನು ಬಳಸಿಕೊಂಡು ವರ್ಮಾ ಮತ್ತು ಝಡ್‌ಟಿವಿ ಟೆಲಿಕಾಂ ಇಂಡಿಯಾ ಪ್ರೈ.ಲಿ.ನಡುವೆ ನಡೆದಿದ್ದ ವಹಿವಾಟಿನ ಸ್ವರೂಪ ಮತ್ತು ಉದ್ದೇಶ ಟೈಟ್ಲರ್‌ಗೆ ತಿಳಿದಿತ್ತು ಎಂದು ಆರೋಪಿಸಲಾಗಿದೆ.
ವಿಚಾರಣಾ ನ್ಯಾಯಾಲಯವು ಟೈಟ್ಲರ್ ಮತ್ತು ವರ್ಮಾ ವಿರುದ್ಧ ಆರೋಪಗಳನ್ನು ರೂಪಿಸಿ 2015,ಡಿ.9ರಂದು ಆದೇಶಿಸಿತ್ತು.
ಸದ್ಯ ಟೈಟ್ಲರ್ ಮತ್ತು ವರ್ಮಾ ಜಾಮೀನಿನಲ್ಲಿ ಹೊರಗಿದ್ದಾರೆ.
Next Story





