ಪಂಚಕುಲ ಹಿಂಸಾಚಾರ: ಪೊಲೀಸ್, ಡೇರಾ ಸಿಎ ಬಂಧನ

ಚಂಡಿಗಢ, ಅ. 17: ಪಂಚಕುಲದ ಸಿಬಿಐ ನ್ಯಾಯಾಲಯದಿಂದ ಸೆಪ್ಟಂಬರ್ 23ರಂದು ಡೇರಾ ಮುಖ್ಯಸ್ತ ಬಾಬಾ ಗುರ್ಮಿತ್ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದ ಆರೋಪದಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಪಂಚಕುಲ ಹಿಂಸಾಚಾರದ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಡೇರಾದ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಎಂಎಸ್‌ಜಿ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸಿ.ಪಿ. ಅರೋರಾ ಅವರನ್ನು ಹರ್ಯಾಣ ಪೊಲೀಸ್ ವಿಶೇಷ ತನಿಖಾ ತಂಡ ಬಂಧಿಸಿದೆ.
ಅಕ್ಟೋಬರ್ 13ರಂದು ಪಂಚಕುಲ ನ್ಯಾಯಾಲಯ ಡೇರಾ ಮುಖ್ಯಸ್ಥ ಬಾಬಾ ಗುರ್ಮಿತ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಹಾಗೂ ಆಕೆಯ ಸಹವರ್ತಿ ಸುಖ್‌ದೀಪ್ ಕೌರ್‌ಗೆ ಅಕ್ಟೋಬರ್ 23ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಅಕ್ಟೋಬರ್ 10ರಂದು ನ್ಯಾಯಾಲಯ ಹನಿಪ್ರೀತ್ ಹಾಗೂ ಆಕೆಯ ಸಹವರ್ತಿ ಸುಖ್‌ದೀಪ್ ಕೌರ್‌ಗೆ ಮೂರು ದಿನಗಳ ಬಂಧನ ವಿಧಿಸಿತ್ತು. ವಿಚಾರಣೆಗೆ ಹನಿಪ್ರೀತ್ ಸಹಕರಿಸುತ್ತಿಲ್ಲ ಎಂದು ಹರ್ಯಾಣ ಪೊಲೀಸರು ಪ್ರತಿಪಾದಿಸಿದ್ದರು.
ಹನಿಪ್ರೀತ್ ಪೊಲೀಸರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪಂಚಕುಲ ಪೊಲೀಸ್ ಆಯುಕ್ತ ಎ.ಎಸ್. ಚಾವ್ಲಾ ತಿಳಿಸಿದ್ದರು.





