ಪ್ರಧಾನ ಮಂತ್ರಿ ಕಚೇರಿಯಲ್ಲಿ ಬೆಂಕಿ
ಹೊಸದಿಲ್ಲಿ, ಅ. 17: ಪ್ರಧಾನ ಮಂತ್ರಿ ಕಚೇರಿಯಲ್ಲಿ ಮಂಗಳವಾರ ಮುಂಜಾನೆ ಸಣ್ಣ ಮಟ್ಟದ ಬೆಂಕಿ ಕಾಣಿಸಿಕೊಂಡಿದೆ.
ಎರಡನೇ ಮಹಡಿಯಲ್ಲಿರುವ 242ನೇ ಸಂಖ್ಯೆಯ ಕೊಠಡಿಯಲ್ಲಿ ಮುಂಜಾನೆ 3.35ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತು.
ಪ್ರಧಾನ ಮಂತ್ರಿ ಕಚೇರಿಯ 242ನೇ ಸಂಖ್ಯೆಯ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದಾಗಿ ಮುಂಜಾನೆ ಸುಮಾರು 3.35ರ ಹೊತ್ತಿಗೆ ನಮ್ಮ ನಿಯಂತ್ರಣಾ ಕೊಠಡಿಗೆ ಮಾಹಿತಿ ಬಂದಿತ್ತು ಎಂದು ವಿಭಾಗೀಯ ಅಗ್ನಿ ಶಾಮಕ ಅಧಿಕಾರಿ ಗುರುಮುಖ್ ಸಿಂಗ್ ತಿಳಿಸಿದ್ದಾರೆ.
ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. 20 ನಿಮಿಷಗಳ ಒಳಗೆ ಬೆಂಕಿ ನಂದಿಸಿದರು. ಕಂಪ್ಯೂಟರ್ ಯುಪಿಎಸ್ನಲ್ಲಿ ಉತ್ಪತ್ತಿಯಾದ ಕಿಡಿಯಿಂದ ಬೆಂಕಿ ಹತ್ತಿಕೊಂಡಿತು. ಇದರಿಂದ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕೊಠಡಿ ವಿಭಾಗೀಯ ಅಧಿಕಾರಿಗೆ ಸೇರಿದ್ದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Next Story