ಶಾಲೆಗಳಲ್ಲಿ ಸಸಿ ನೆಡುವ ದಕ್ಷ ವನ ಅಭಿಯಾನಕ್ಕೆ ಚಾಲನೆ

ಉಡುಪಿ, ಅ.17: ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಮೆನ್ಸ್ ಕ್ಲಬ್ ದಕ್ಷ ಹಾಗೂ ದ್ರವ್ಯಗುಣ ವಿಭಾಗದ ಸಂಯೋಗದಲ್ಲಿ ಜನಸಾಮಾನ್ಯರಿಗೆ ಆಯುರ್ವೇದದ ಜೌಷಧೀಯ ಸಸ್ಯಗಳನ್ನು ಪರಿಚಯಿಸಿ ಅವುಗಳನ್ನು ನೆಟ್ಟು ಬೆಳೆಸುವ ದಕ್ಷ ವನ ಅಭಿಯಾನಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಈ ಅಭಿಯಾನದ ಅಂಗವಾಗಿ ಕುತ್ಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಿದಿಯೂರು ವಿದ್ಯಾಸಮುದ್ರ ತೀರ್ಥ ಹಿರಿಯ ಪ್ರಾಥಮಿಕ ಶಾಲೆ, ಕಡೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರ್ಣೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಯುರ್ವೇದದ 50ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳ ಮಾಹಿತಿ ನೀಡಿ ಗಿಡಗಳನ್ನು ನೆಡಲಾಯಿತು.
ಈ ಅಭಿಯಾನವನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ. ವಿನಾಶದ ಅಂಚಿನಲ್ಲಿರುವ ಆಯುರ್ವೇದ ಸಸ್ಯಗಳ ರಕ್ಷಣೆ ಹಾಗೂ ಪಾಲನೆ ಈ ಅಭಿಯಾನದ ಉದ್ದೇಶ ವಾಗಿದೆ ಎಂದು ಸಂಚಾಲಕ ಡಾ ರವಿ ಕೆ.ವಿ. ತಿಳಿಸಿದರು.
Next Story





