Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 8 ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡುವ...

8 ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡುವ ಬೃಹತ್ ಶಿಬಿರ: ಬಾಂಗ್ಲಾ ಘೋಷಣೆ

ವಾರ್ತಾಭಾರತಿವಾರ್ತಾಭಾರತಿ17 Oct 2017 10:10 PM IST
share
8 ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡುವ ಬೃಹತ್ ಶಿಬಿರ: ಬಾಂಗ್ಲಾ ಘೋಷಣೆ

ಹೊಸದಿಲ್ಲಿ, ಅ. 17: ಮ್ಯಾನ್ಮಾರ್‌ನಿಂದ ಸಾಗರೋಪಾದಿಯಲ್ಲಿ ಹರಿದುಬರುತ್ತಿರುವ ರೊಹಿಂಗ್ಯಾ ಮುಸ್ಲಿಮರಿಗಾಗಿ ಬೃಹತ್ ನಿರಾಶ್ರಿತ ಶಿಬಿರವೊಂದನ್ನು ನಿರ್ಮಿಸುವ ಯೋಜನೆಯನ್ನು ಬಾಂಗ್ಲಾದೇಶ ಪ್ರಕಟಿಸಿದೆ. ಈ ಶಿಬಿರದಲ್ಲಿ ಸುಮಾರು 8 ಲಕ್ಷ ಮಂದಿಗೆ ಆಶ್ರಯ ನೀಡಬಹುದಾಗಿದೆ.

ಈ ಶಿಬಿರವು ಜಗತ್ತಿನ ಅತ್ಯಂತ ದೊಡ್ಡ ನಿರಾಶ್ರಿತ ಶಿಬಿರವಾಗಿದೆ ಹಾಗೂ ಇಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯೂ ಅಧಿಕವಾಗಿದೆ ಎನ್ನಲಾಗಿದೆ.

ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಪೊಲೀಸ್ ಮತ್ತು ಸೇನಾ ಠಾಣೆಗಳ ಮೇಲೆ ಸರಣಿ ದಾಳಿ ನಡೆಸಿದ ಬಳಿಕ, ಸೇನೆ ನಡೆಸಿದ ಪ್ರತೀಕಾರಾತ್ಮಕ ದಮನ ಕಾರ್ಯಾಚರಣೆಗೆ ಬೆದರಿ ಈಗಾಗಲೇ ಸುಮಾರು 5.5 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಬಾಂಗ್ಲಾದೇಶದಲ್ಲಿ ಈಗಾಗಲೇ ಸುಮಾರು 3 ಲಕ್ಷ ರೊಹಿಂಗ್ಯಾ ನಿರಾಶ್ರಿತರು ವಿವಿಧ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

6.55 ಕೋಟಿ ನಿರಾಶ್ರಿತರು

ಜಗತ್ತಿನಲ್ಲಿ ಇಂದು ಸುಮಾರು 6.55 ಕೋಟಿ ನಿರಾಶ್ರಿತರಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ ಅಂದಾಜಿಸಿದೆ.

►ಜಗತ್ತಿನ ಇತರ ಬೃಹತ್ ಶಿಬಿರಗಳು

ಜಗತ್ತಿನ ಕೆಲವು ಬೃಹತ್ ಶಿಬಿರಗಳ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ:

►ಬಿಡಿಬಿಡಿ (ಉಗಾಂಡ): 2,85,000

ದಕ್ಷಿಣ ಸುಡಾನ್‌ನಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ ಮತ್ತು ತೀವ್ರ ಆಹಾರದ ಕೊರತೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಜನರು ವಲಸೆ ಹೋದ ಬಳಿಕ ಉಗಾಂಡದ ತೀರಾ ಉತ್ತರ ಭಾಗದಲ್ಲಿ ಈ ಶಿಬಿರವನ್ನು ಸ್ಥಾಪಿಸಲಾಗಿದೆ.

ದಕ್ಷಿಣ ಸುಡಾನ್‌ನ ಗಡಿಯಲ್ಲಿರುವ ಬಿಡಿಬಿಡಿ ನಿರಾಶ್ರಿತ ಶಿಬಿರದಲ್ಲಿ ಈಗ ಸುಮಾರು 2.85 ಲಕ್ಷ ನಿರಾಶ್ರಿತರಿದ್ದಾರೆ.

►ದದಾಬ್ (ಕೆನ್ಯ): 2,39,500 ನಿರಾಶ್ರಿತರು

ಕೆನ್ಯವು ಸೊಮಾಲಿಯದೊಂದಿಗೆ ಹಂಚಿಕೊಂಡಿರುವ ಗಡಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿ ಬೃಹತ್ ದದಾಬ್ ನಿರಾಶ್ರಿತ ಶಿಬಿರವಿದೆ. ಇಲ್ಲಿ ಸುಮಾರು 26 ವರ್ಷಗಳಿಂದ ಸೊಮಾಲಿ ನಿರಾಶ್ರಿತರಿದ್ದಾರೆ.

 1991ರಲ್ಲಿ ಸೊಮಾಲಿಯದಲ್ಲಿ ತಲೆದೋರಿದ ಆಂತರಿಕ ಕಲಹದ ಬಳಿಕ ಹೆಚ್ಚಿನವರು ಕೆನ್ಯಕ್ಕೆ ಪರಾರಿಯಾದವರು. ಅವರಲ್ಲಿ ಹೆಚ್ಚಿನವರು ಹಿಂದಿರುಗಿಲ್ಲ.

►ಕಕುಮ (ಕೆನ್ಯ): 1,85,000 ನಿರಾಶ್ರಿತರು

ಕೆನ್ಯದ ವಾಯುವ್ಯ ಭಾಗದಲ್ಲಿರುವ ಕಕುಮ ಪಟ್ಟಣದ ಹೊರವಲಯದಲ್ಲಿ ಈ ಶಿಬಿರವಿದೆ. ದಕ್ಷಿಣ ಸುಡಾನ್‌ನಲ್ಲಿ 1983ರಿಂದ 2005ರವರೆಗೆ ನಡೆದ ಆಂತರಿಕ ಯುದ್ಧಕ್ಕೆ ಬೆದರಿ ಸಾವಿರಾರು ಮಂದಿ ವಲಸೆ ಬಂದ ಬಳಿಕ 1992ರಲ್ಲಿ ಈ ಶಿಬಿರವನ್ನು ಸ್ಥಾಪಿಸಲಾಗಿದೆ.

►ನಯರುಗುಸು (ತಾಂಝಾನಿಯ): 1,39,630 ನಿರಾಶ್ರಿತರು

1996ರ ನವೆಂಬರ್‌ನಲ್ಲಿ ಸ್ಥಾಪನೆಯಾದ ಈ ಶಿಬಿರವು ಬುರುಂಡಿಯ ಗಡಿಯಿಂದ 37 ಕಿ.ಮೀ. ದೂರದಲ್ಲಿದೆ. ನೆರೆಯ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ಬೆದರಿ ಪಲಾಯನ ಮಾಡಿದ ಜನರಿಗಾಗಿ ಈ ಶಿಬಿರವನ್ನು ಸ್ಥಾಪಿಸಲಾಗಿದೆ.

►ಝಟಾರಿ (ಜೋರ್ಡಾನ್): 80,140 ನಿರಾಶ್ರಿತರು

2011ರಲ್ಲಿ ಅರಾಜಕತೆ ತಾಂಡವವಾಡಿದ ಬಳಿಕ ಸುಮಾರು 52 ಲಕ್ಷ ಸಿರಿಯನ್ನರು ತಮ್ಮ ದೇಶದಿಂದ ಪಲಾಯನಗೈದಿದ್ದಾರೆ. ಇದು ಇಂದಿನ ಮಟ್ಟಿಗೆ ಜಗತ್ತಿನ ಅತಿ ದೊಡ್ಡ ವಲಸೆಯಾಗಿದೆ.

ಹೆಚ್ಚಿನವರು ನೆರೆಯ ದೇಶಗಳಲ್ಲಿದ್ದಾರೆ. ಅವರ ಪೈಕಿ ಕೇವಲ 9 ಶೇಕಡ ಶಿಬಿರಗಳಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಹೇಳುತ್ತದೆ.

ಜೋರ್ಡಾನ್‌ನಲ್ಲಿರುವ ನಿರಾಶ್ರಿತರ ಪೈಕಿ ಸುಮಾರು 20 ಶೇಕಡದಷ್ಟು ಶಿಬಿರಗಳಲ್ಲಿದ್ದಾರೆ. ಆ ಪೈಕಿ ಹೆಚ್ಚಿನವರು, ಅಂದರೆ ಸುಮಾರು 80,140 ಮಂದಿ ಝಟಾರಿ ಶಿಬಿರದಲ್ಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X