47.5 ಲಕ್ಷ ಮನೆ ಕೆಲಸದವರಿಗೆ ಕಾನೂನು ರಕ್ಷಣೆ: ರಾಷ್ಟ್ರೀಯ ನೀತಿ ರೂಪಿಸಿಲು ಉದ್ಯೋಗ ಸಚಿವಾಲಯ ನಿರ್ಧಾರ

ಹೊಸದಿಲ್ಲಿ, ಅ. 17: ಮೂವತ್ತು ಲಕ್ಷ ಮಹಿಳೆಯರೂ ಸೇರಿದಂತೆ 47.5 ಲಕ್ಷ ಮನೆ ಕೆಲಸದವರಿಗೆ ಸಮಾನ ಸಂಭಾವನೆ ಹಾಗೂ ಕನಿಷ್ಠ ಕೂಲಿಯ ಖಾತರಿ ನೀಡಲು ರಾಷ್ಟ್ರೀಯ ನೀತಿ ರೂಪಿಸಿ ದೇಶದಲ್ಲಿರುವ ಮನೆ ಕೆಲಸಗಾರರಿಗೆ ಕಾನೂನಿನ ಸ್ಥಾನಮಾನ ನೀಡಲು ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ನಿರ್ಧರಿಸಿದೆ.
ಇತರ ವರ್ಗದ ಕೆಲಸಗಾರರಂತೆ ಮನೆ ಕೆಲಸದವರಿಗೆ ಅವರ ಹಕ್ಕು ನೀಡಲು ಕಾನೂನು ಅನ್ವಯದ ವ್ಯಾಪ್ತಿ, ನೀತಿ ಹಾಗೂ ಕಾನೂನನ್ನು ಸ್ಪಷ್ಟಗೊಳಿಸುವ ಹಾಗೂ ಪರಿಣಾಮಕಾರಿಯಾಗಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ.
ಈ ರಾಷ್ಟ್ರೀಯ ನೀತಿ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡುವ ಮೂಲಕ ಮನೆ ಕೆಲಸಗಾರರನ್ನು ಕಾರ್ಮಿಕರು ಎಂದು ಗುರುತಿಸಲಿದೆ.
ಮನೆ ಕೆಲಸದವರ ವಿವಾದ ಪರಿಹಾರ, ಸಂಕಷ್ಟ ಪರಿಹಾರ ಉದ್ಯೋಗ ನ್ಯಾಯಯುತ ಅವಧಿ, ಸಾಮಾಜಿಕ ಭದ್ರತೆ ನೀಡುವ ಈ ಹಿನ್ನೆಲೆಯಲ್ಲಿ ಈ ಸಾಂಸ್ಥಿಕ ವ್ಯವಸ್ಥೆ ಕಾರ್ಯ ನಿರ್ವಹಿಸಲಿದೆ. ಇದರ ಹೊರತಾಗಿ ಕಿರುಕುಳ ತಡೆಗಟ್ಟಲು ನೇಮಕಾತಿ ಹಾಗೂ ಉದ್ಯೊಗ ಅವಕಾಶ ಒದಗಿಸುವ ಸಂಸ್ಥೆಯ ನಿಯಂತ್ರಣಕ್ಕೆ ಈ ರಾಷ್ಟ್ರೀಯ ನೀತಿ ನೆರವಾಗಲಿದೆ.
Next Story





