ನ್ಯೂಝಿಲೆಂಡ್ ವಿರುದ್ಧ ಮಂಡಳಿ ಅಧ್ಯಕ್ಷರ ಇಲೆವೆನ್ ಗೆ ಜಯ
ಅಭ್ಯಾಸ ಪಂದ್ಯ
ಮುಂಬೈ, ಅ.17: ಹದಿನೇಳರ ಹರೆಯದ ಪೃಥ್ವಿ ಶಾ ಮತ್ತು ಲೋಕೇಶ್ ರಾಹುಲ್ ಅವರ ಉತ್ತಮ ಬ್ಯಾಟಿಂಗ್ ನೆರವಿನಲ್ಲಿ ಪ್ರವಾಸಿ ನ್ಯೂಝಿಲೆಂಡ್ ವಿರುದ್ಧ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ 30 ರನ್ಗಳ ಜಯ ಗಳಿಸಿದೆ. ಗೆಲುವಿಗೆ 296 ರನ್ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ 47.4 ಓವರ್ಗಳಲ್ಲಿ 265 ರನ್ಗಳಿಗೆ ಆಲೌಟಾಗಿದೆ.
ಮೊದಲ ಬಾರಿ ಹಿರಿಯರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಡುತ್ತಿರುವ ಸ್ಥಳೀಯ ಆಟಗಾರ ಪೃಥ್ವಿ ಶಾ ಅವರು ಲೋಕೇಶ್ ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್ಗೆ 147 ರನ್ಗಳ ಜೊತೆಯಾಟ ನೀಡಿದ್ದರು.
ಪೃಥ್ವಿ 80 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 66 ರನ್, ಲೋಕೇಶ್ ರಾಹುಲ್ 75 ಎಸೆತಗಳಲ್ಲಿ 68ರನ್ ಮತ್ತು ಕರುಣ್ ನಾಯರ್ 64 ಎಸೆತಗಳಲ್ಲಿ 78 ರನ್ ದಾಖಲಿಸಿ ನ್ಯೂಝಿಲೆಂಡ್ ತಂಡಕ್ಕೆ ಕಠಿಣ ಸವಾಲು ವಿಧಿಸಲು ನೆರವಾದರು.
ಶಹಬಾಝ್ ನದೀಮ್ (41ಕ್ಕೆ 3) ದಾಳಿಗೆ ಸಿಲುಕಿದ ನ್ಯೂಝಿಲೆಂಂಡ್ ತಂಡ ಗೆಲುವಿನ ದಡ ಸೇರುವಲ್ಲಿ ಎಡವಿತು.ಕೇನ್ ವಿಲಿಯಮ್ಸ್ 47 ರನ್ ಮತ್ತು ಟಾಮ್ ಲಥಾಮ್ ಅವರು ನ್ಯೂಝಿಲೆಂಡ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಮಂಡಳಿ ಅಧ್ಯಕ್ಷರ ಇಲೆವೆನ್ 50 ಓವರ್ಗಳಲ್ಲಿ 295/9( ಶಾ 66, ಕರುಣ್ ನಾಯರ್ 78, ರಾಹುಲ್ 68).
ನ್ಯೂಝಿಲೆಂಡ್ 47.4 ಓವರ್ಗಳಲ್ಲಿ 265( ವಿಲಿಯಮ್ಸನ್ 47, ಲಥಾಮ್ 59; ನದೀಮ್ 41ಕ್ಕೆ 3).