ಪುರೋಹಿತರಾಗಿ ಕೆಲಸ ಮಾಡುವ ಬ್ರಾಹ್ಮಣ ಯುವಕರನ್ನು ಮದುವೆಯಾಗುವ ಯುವತಿಯರಿಗೆ 3 ಲಕ್ಷ ರೂ.!

ಹೊಸದಿಲ್ಲಿ, ಅ.18: ದೇವಸ್ಥಾನಗಳಲ್ಲಿ ಪುರೋಹಿತರಾಗಿ ಕೆಲಸ ಮಾಡುವ ಬ್ರಾಹ್ಮಣ ಅವಿವಾಹಿತರನ್ನು ಮದುವೆಯಾಗುವ ಯುವತಿಯರಿಗೆ 3 ಲಕ್ಷ ರೂ. ನೀಡುವುದಾಗಿ ತೆಲಂಗಾಣ ಸರಕಾರ ಹೇಳಿದೆ.
ದೇವಸ್ಥಾನಗಳಲ್ಲಿ ಪುರೋಹಿತರಾಗಿ ಕೆಲಸ ಮಾಡುವ ಬ್ರಾಹ್ಮಣ ಯುವಕರನ್ನು ವಧುಗಳನ್ನು ಹುಡುಕುವುದು ಪ್ರಸ್ತುತ ಕಷ್ಟಕರವಾಗಿರುವುದರಿಂದ ಈ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫಿಕ್ಸಡ್ ಡೆಪಾಸಿಟ್ ರೀತಿಯಲ್ಲಿ ದಂಪತಿಗೆ 3 ಲಕ್ಷ ರೂ. ನೀಡುವ ಜೊತೆಗೆ ಮದುವೆ ಸಮಾರಂಭದ ಖರ್ಚಿಗೂ ಸರಕಾರ 1 ಲಕ್ಷ ರೂ. ನೀಡಲಿದೆ.
“ಇಂದಿನ ದಿನಗಳಲ್ಲಿ ಯುವತಿಯರು ವರರ ಆಯ್ಕೆಯ ವಿಷಯದಲ್ಲಿ ಬದಲಾಗಿದ್ದಾರೆ. ಅನಿಶ್ಚಿತ ಉದ್ಯೋಗದ ಕಾರಣದಿಂದಾಗಿ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೂ ಮದುವೆಯಾಗುವುದು ಕಷ್ಟಕರವಾಗಿದೆ. ಇದಕ್ಕೆ ಹೋಲಿಸಿದರೆ ದೇವಸ್ಥಾನಗಳಲ್ಲಿ ಪುರೋಹಿತರಾಗಿರುವ ಬ್ರಾಹ್ಮಣ ಯುವಕರಿಗೆ ವಧು ಸಿಗುವುದು ಮತ್ತಷ್ಟು ಕಷ್ಟಕರವಾಗಿದೆ” ಎಂದು ತೆಲಂಗಾಣ ಬ್ರಾಹ್ಮಣ ಸಮ್ಕ್ಷೇಮ ಪರಿಷದ್ ಚೇರ್ ಮೆನ್ ಕೆ.ವಿ. ರಾಮನಾಚಾರ್ಯ ಹೇಳಿದ್ದಾರೆ.
Next Story





