Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​ಟಿಎಂಎ ಪೈ ಕನ್‌ವೆನ್‌ಶನ್ ಹಾಲ್‌ನೊಂದಿಗೆ...

​ಟಿಎಂಎ ಪೈ ಕನ್‌ವೆನ್‌ಶನ್ ಹಾಲ್‌ನೊಂದಿಗೆ ‘ದಿ ಓಶಿಯನ್ ಪರ್ಲ್’ ಒಡಂಬಡಿಕೆ

► ಎಲ್ಲ ಬಜೆಟ್ ಗೆ ಸೂಕ್ತ ಹಲಾಲ್ ಊಟ, ಹಾಲ್ ವ್ಯವಸ್ಥೆ ► ಮಿತ ದರದಲ್ಲಿ ವೈವಿಧ್ಯಮಯ ಖಾದ್ಯಗಳು

ವಾರ್ತಾಭಾರತಿವಾರ್ತಾಭಾರತಿ18 Oct 2017 9:18 PM IST
share
​ಟಿಎಂಎ ಪೈ ಕನ್‌ವೆನ್‌ಶನ್ ಹಾಲ್‌ನೊಂದಿಗೆ ‘ದಿ ಓಶಿಯನ್ ಪರ್ಲ್’ ಒಡಂಬಡಿಕೆ

ಮಂಗಳೂರು, ಅ.18: ದೇಶಾದ್ಯಂತ ಮನೆ ಮಾತಾಗಿರುವ ‘ದಿ ಓಶಿಯನ್ ಪರ್ಲ್ ಹೊಟೇಲ್ ಪ್ರೈ.ಲಿ.’ ಸಂಸ್ಥೆಗೆ ಸೇರಿದ ನಗರದ ಕೋಡಿಯಾಲ್‌ಬೈಲ್‌ನ ನವಭಾರತ್ ಸರ್ಕಲ್ ಬಳಿ ಇರುವ ‘ದಿ ಓಶಿಯನ್ ಪರ್ಲ್’ ಹೊಟೇಲ್ ನಗರದ ಟಿಎಂಎ ಪೈ ಕನ್‌ವೆನ್‌ಶನ್ ಹಾಲ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಇದರ ಪ್ರಕಾರ ಟಿಎಂಎ ಪೈ ಕನ್‌ವೆನ್‌ಶನ್ ಹಾಲ್‌ನಲ್ಲಿ ನಡೆಯುವ ಮದುವೆ, ಮೆಹಂದಿ, ಔತಣಕೂಟ ಇತ್ಯಾದಿ ಸಭೆ-ಸಮಾರಂಭದ ಸಂಪೂರ್ಣ ನಿರ್ವ ಹಣೆಯ ಜವಾಬ್ದಾರಿಯನ್ನು ‘ದಿ ಓಶಿಯನ್ ಪರ್ಲ್ ಹೊಟೇಲ್ ಪ್ರೈ.ಲಿ.’ ವಹಿಸಿಕೊಂಡಿದೆ. ಸದ್ಯ ಮೂರು ವರ್ಷಗಳ ಮಟ್ಟಿಗೆ ಮಾಡಿಕೊಂಡಿರುವ ಈ ಒಪ್ಪಂದದ ಪ್ರಕಾರ ಎಲ್ಲ ಕಾರ್ಯಕ್ರಮಗಳಿಗೆ ಬೇಕಾದ ಸಸ್ಯಹಾರಿ, ಮಾಂಸಹಾರಿ ಆಹಾರ, ತಿಂಡಿ-ತಿನಿಸು, ಚಹಾ-ಕಾಫಿ ಮತ್ತಿತರ ಪಾನೀಯ ಪೂರೈಕೆ, ಹಾಲ್ ಸೆಟ್ಟಿಂಗ್ ಇತ್ಯಾದಿ ಅಡಕವಾಗಿರುತ್ತವೆ.

ಮದುವೆ ಮತ್ತಿತರ ಶುಭ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮನೆ ಮಂದಿಗೆ ಮತ್ತು ಸಭಾ ಕಾರ್ಯಕ್ರಮದ ಸಂಘಟಕರಿಗೆ ಹೊರಗಿನಿಂದ ಆಹಾರ ತರಿಸುವ ಅವಕಾಶವಿದ್ದರೂ ಕೂಡ ‘ದಿ ಓಶಿಯನ್ ಪರ್ಲ್’ ಅತ್ಯಂತ ಕಡಿಮೆ ದರದಲ್ಲಿ ಸಂಪೂರ್ಣ ಹಲಾಲ್ ಆದ ಆಹಾರವನ್ನೇ ಪೂರೈಸಲು ಸಿದ್ಧವಾಗಿದೆ.

ಟಿಎಂಎ ಪೈ ಕನ್‌ವೆನ್‌ಶನ್ ಹಾಲ್ ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತ ಎಂಬ ಭಾವನೆ ಸಾರ್ವತ್ರಿಕವಾಗಿದೆ. ಅದನ್ನು ಹೋಗಲಾಡಿಸಿ ಮಧ್ಯಮ ವರ್ಗದ ಜನರೂ ತಮ್ಮ ಬಜೆಟ್‌ನಲ್ಲಿ ಕೂಡ ಇಲ್ಲಿ ಮದುವೆ, ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸಲು ‘ದಿ ಓಶಿಯನ್ ಪರ್ಲ್’ ಮುಂದಾಗಿದೆ. ಜನಸಾಮಾನ್ಯರು ಯಾವುದೇ ಕ್ಷಣ ಅತ್ಯಂತ ಸುಲಭವಾಗಿ ಸಂಚಾರ ದಟ್ಟಣೆಯಿಂದ ಮುಕ್ತವಾಗಿ ‘ಟಿಎಂಎ ಪೈ ಹಾಲ್’ ತಲುಪಬಹುದಾಗಿದ್ದು, ವಾಹನಗಳ ಪಾರ್ಕಿಂಗ್‌ಗೂ ವಿಶಾಲ ಸ್ಥಳಾವಕಾಶವಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಬಿ.ಎನ್. ಗಿರೀಶ್ ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಜನರು ಹಲಾಲ್ ಆದ ಮಾಂಸಾಹಾರವನ್ನೇ ಸೇವಿಸುತ್ತಾರೆ. ಧಾರ್ಮಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಮತ್ತು ನಂಬಿಕೆಗೆ ಪಾತ್ರವಾಗಿರುವ ಈ ವಿಚಾರವನ್ನು ಗಮನದಲ್ಲಿರಿಸಿಕೊಂಡಿರುವ ‘ದಿ ಓಶಿಯನ್ ಪರ್ಲ್’ ಸಂಸ್ಥೆಯು ಹಲಾಲ್ ಆದ ಆಹಾರವನ್ನೇ ಪೂರೈಸಲಿದೆ ಎಂದು ‘ದಿ ಓಶಿಯನ್ ಪರ್ಲ್’ ಬಿ.ಎನ್. ಗಿರೀಶ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ವಿಶೇಷ ಆಫರ್

‘ಟಿಎಂಎ ಪೈ ಹಾಲ್’ನಲ್ಲಿ ನಡೆಯುವ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಬೇಕಾದ ಭಕ್ಷ ಭೋಜನಕ್ಕೆ ‘ದಿ ಓಶಿಯನ್ ಪರ್ಲ್’ ಹೊಟೇಲ್‌ಗೆ ನೇರ ಆರ್ಡರ್ ನೀಡಿದರೆ ಬಾಡಿಗೆ ದರದಲ್ಲಿ ಶೇ.50ರಷ್ಟು ಕಡಿತಗೊಳಿಸುವ ವಿಶೇಷ ಆಫರ್ ಅನ್ನು ಕೂಡ ‘ದಿ ಓಶಿಯನ್ ಪರ್ಲ್’ ನೀಡಿದೆ. ಇದು ಇಲ್ಲಿ ಕಾರ್ಯಕ್ರಮ ಆಯೋಜಿಸಲು ಬಯಸುವ ಗ್ರಾಹಕರಿಗೆ ಹೆಚ್ಚು ಅನುಕೂಲವಾಗುವುದರಲ್ಲಿ ಸಂಶಯವಿಲ್ಲ ಎಂದು ಬಿ.ಎನ್. ಗಿರೀಶ್ ಅಭಿಪ್ರಾಯಪಟ್ಟಿದ್ದಾರೆ.

‘ದಿ ಓಶಿಯನ್ ಪರ್ಲ್’ನಲ್ಲೂ ವೈವಿಧ್ಯಮಯ ಹಲಾಲ್ ಖಾದ್ಯಗಳು

ಕಳೆದ 7 ವರ್ಷದಿಂದ ಮಂಗಳೂರು ಸಹಿತ ಉಡುಪಿ, ಕಾಸಗರೋಡು ಮತ್ತಿತರ ಆಸುಪಾಸಿನ ಜಿಲ್ಲೆ ಮಾತ್ರವಲ್ಲ ದೇಶ ವಿದೇಶದಿಂದ ಆಗಮಿಸುವ ವಿಶೇಷ ಅತಿಥಿಗಳಲ್ಲಿ ಮನೆ ಮಾತಾಗಿರುವ ‘ದಿ ಓಶಿಯನ್ ಪರ್ಲ್’ನಲ್ಲಿ ಹಲಾಲ್ ಆದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಇಲ್ಲಿ ಹಲಾಲ್ ಆಹಾರ ಮಾತ್ರ ಲಭ್ಯವಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸಂಸ್ಥೆಯ ಉಪಾಧ್ಯಕ್ಷ ಬಿ.ಎನ್. ಗಿರೀಶ್ ತಿಳಿಸಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ ಬಿ.ಎನ್. ಗಿರೀಶ್ ‘ನಾವು ಎಲ್ಲ ಧರ್ಮವನ್ನೂ ಸಮಾನವಾಗಿ ಕಾಣುವವರು. ಪ್ರತಿಯೊಂದು ಧರ್ಮೀಯರು ತಮ್ಮ ಧಾರ್ಮಿಕ ನಂಬಿಕೆಯಂತೆ ಆಹಾರ, ತಿಂಡಿ-ತಿನಿಸುಗಳನ್ನು ತಿನ್ನಲು ಬಯಸುತ್ತಾರೆ. ಗ್ರಾಹಕರೇ ದೇವರು ಎಂಬ ಭಾವಿಸುವ ನಾವು ಯಾವತ್ತೂ ಕೂಡ ಯಾವುದೇ ಧರ್ಮೀಯರಿಗೆ ಚ್ಯುತಿಯಾಗುವಂತೆ ಈವರೆಗೆ ನೋಡಿಕೊಂಡಿಲ್ಲ. ಮುಂದೆಯೂ ನೋಡುವುದಿಲ್ಲ. ಮುಸ್ಲಿಮರ ಪಾಲಿಗೆ ಹಲಾಲ್ ಆದ ಮಾಂಸಾಹಾರ ಭಕ್ಷ ಯೋಗ್ಯ ಎಂಬುದು ನಮಗೆ ಚೆನ್ನಾಗಿ ಗೊತ್ತು. ಅದರಂತೆ ನಾವು ಈವರೆಗೆ ಹಲಾಲ್ ಆದ ಮಾಂಸಾಹಾರವನ್ನೇ ನೀಡಿದ್ದೇವೆ. ಹಲಾಲ್ ಆದ ಮಾಂಸವನ್ನೇ ಖರೀದಿಸಿ, ಅದರ ಗುಣಮಟ್ಟವನ್ನು ಪರೀಕ್ಷಿಸಿದ ಬಳಿಕವೇ ನಾವು ಆಹಾರ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದೇವೆ’ ಎಂದಿದ್ದಾರೆ.

‘ದಿ ಓಶಿಯನ್ ಪರ್ಲ್’ ಕೂಡ ಶ್ರೀಮಂತರಿಗೆ ಮಾತ್ರ ಸೀಮಿತವಾಗಿರುವ ಹೊಟೇಲ್ ಎಂಬ ಮಾತಿದೆ. ಆದರೆ ನಾವು ಜನಸಾಮಾನ್ಯರಿಗೂ ನಮ್ಮ ಹೊಟೇಲ್‌ನ ಬಾಗಿಲನ್ನು ಸದಾ ತೆರೆದಿರುತ್ತೇವೆ. ಹಲಾಲ್ ಆದ ಮಾಂಸವನ್ನು ಖರೀದಿಸಿ ರುಚಿ-ಶುಚಿಯಾದ ಆಹಾರ ಪೂರೈಕೆ ಮಾಡುವುದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು, ಅವರ ಧಾರ್ಮಿಕ ನಂಬಿಕೆಯನ್ನು ಗೌರವಿಸುವುದು, ಕುಟುಂಬ ಸಮೇತ ಎಲ್ಲರೂ ಬಂದು ತಿಂದುಂಡು ಸಂತೃಪ್ತಿ ಹೊಂದುವುದನ್ನೇ ನಾವು ಬಯಸುತ್ತೇವೆ ಎಂದು ಬಿ.ಎನ್. ಗಿರೀಶ್ ಹೇಳಿದರು.

ದೇಶ ಮಾತ್ರವಲ್ಲ ವಿದೇಶೀಯರನ್ನೂ ಆಕರ್ಷಿಸುವ ಈ ‘ಸ್ಟಾರ್’ ಹೊಟೇಲ್‌ನಲ್ಲಿ ಶುಚಿ-ರುಚಿ ಹೆಚ್ಚಿನ ಗಮನಹರಿಸುತ್ತೇವೆ. ಹಾಗಾಗಿಯೇ ಎಷ್ಟೋ ಮಂದಿ ತಡವಾದರೂ ಸರಿ ಊಟಕ್ಕಾಗಿ ಇಲ್ಲಿಗೆ ಆಗಮಿಸಿ ಹೊಟ್ಟೆ ತುಂಬ ತಿಂದುಂಡು ಸಂತೃಪ್ತಿ ಹೊಂದಿದ್ದನ್ನು ನಾವು ನೋಡಿದ್ದೇವೆ. ಗ್ರಾಹಕರ ಆ ಸಂತೃಪ್ತಿಯೇ ನಮ್ಮ ಪಾಲಿನ ಸಂತಸದ ಕ್ಷಣ ಎಂದು ಬಿ.ಎನ್. ಗಿರೀಶ್ ನುಡಿದರು.

‘ದಿ ಓಶಿಯನ್ ಪರ್ಲ್’ನಲ್ಲಿ ಪ್ರತೀ ತಿಂಗಳು ಮಂಗಳೂರು (ಕುಡ್ಲ) ಅಲ್ಲದೆ ನಾರ್ತ್ ಮತ್ತು ಸೌತ್ ಇಂಡಿಯನ್ ಹಾಗೂ ಚೈನೀಸ್ ಫುಡ್ ಫೆಸ್ಟಿವಲ್ ಆಯೋಜಿಸುತ್ತೇವೆ. ಆವಾಗಲೂ ಇಲ್ಲಿ ಹಲಾಲ್ ಆದ ಆಹಾರವನ್ನೇ ಪೂರೈಸಲಾಗುತ್ತದೆ.

ನಾರ್ತ್ ಮತ್ತು ಸೌತ್ ಇಂಡಿಯನ್ ಹಾಗೂ ಚೈನೀಸ್ ಐಟಂಗಳು ಅತ್ಯಂತ ಮಿತ ದರದಲ್ಲೇ ಇಲ್ಲಿ ಲಭ್ಯವಿದೆ. ಮಾಂಸಾಹಾರಕ್ಕೆ ಹೊಟೇಲ್‌ನ ಮೊದಲ ಮಹಡಿಯಲ್ಲಿ ‘ಕೋರಲ್’ ಎಂಬ ಪ್ರತ್ಯೇಕ ವಿಭಾಗವಿದೆ. ತಳ ಅಂತಸ್ತಿನಲ್ಲಿ ಸಸ್ಯಹಾರಿಗಳಿಗೆ ‘ಸಾಗರ್‌ರತ್ನ’ ಎಂಬ ವಿಭಾಗವಿದೆ. ಇನ್ನು 24 ಗಂಟೆಯೂ ಕಾಫಿ, ಪಾನೀಯಗಳಿಗೆ ‘ಟೈಡ್ ಕಾಫಿ ಶಾಪ್’ ಎಂಬ ವಿಭಾಗವೂ ತಳ ಅಂತಸ್ತಿನಲ್ಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X