ಕುಂಬಳೆ : ದೋಣಿ ಮಗುಚಿ ಐದು ಮಂದಿಗೆ ಗಾಯ
ಕುಂಬಳೆ, ಅ. 19: ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದ ಫೈಬರ್ ದೋಣಿಯೊಂದು ಮಗುಚಿ ಬಿದ್ದು, 5 ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ಕುಂಬಳೆ ಕೊಯಿಪ್ಪಾಡಿಯ ಎಸ್.ಕೆ ಹನೀಫ್ (39) , ಜೊತೆಗಿದ್ದ ರಹ್ಮಾನ್ (40) , ಅನೀಸ್ (38) , ಇಬ್ರಾಹಿಂ(32) , ನಿಸಾರ್ (36) ಗಾಯಗೊಂಡವರು.
ಹನೀಫ್ ರ ಕಾಲಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬುಧವಾರ ಮಧ್ಯಾಹ್ನ ಮೀನುಗಾರಿಕೆಗೆ ತೆರಳಿದ್ದ ಇವರು ಸಂಜೆ 6 ಘಂಟೆಯ ವೇಳೆಗೆ ಹಿಂತಿರುಗುತ್ತಿದ್ದ ಮೊಗ್ರಾಲ್ ಸಮುದ್ರದ ದಡ ಸೇರುತ್ತಿದ್ದಂತೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
Next Story