ಹಾವು ಕಡಿದು ಬಾಲಕಿ ಮೃತ್ಯು
ಬಂಟ್ವಾಳ, ಅ. 19: ಹಾವು ಕಡಿದು ಬಾಲಕಿಯೋರ್ವಳು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಶಂಭೂರು ಅಗ್ಗರಪಾದೆ ಎಂಬಲ್ಲಿ ಗುರುವಾರ ನಡೆದಿದೆ.
ಮೃತ ಬಾಲಕಿಯನ್ನು ಅಗ್ಗರಪಾದೆ ನಿವಾಸಿ ರತ್ನಾಕರ ಮತ್ತು ದಯಾವತಿ ದಂಪತಿಯ ಏಕೈಕ ಪುತ್ರಿ ಅನ್ಸಿಕಾ (4) ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿದ್ದ ಕೋಳಿಗೂಡಿನೊಳಗೆ ಕೈ ಹಾಕಿದಾಗ ಈ ಘಟನೆ ಸಂಭವಿಸಿದೆ.
ಈ ಬಗ್ಗೆ ಬಾಲಕಿ ತಲೆಗೆ ಏನೋ ತಾಗಿದೆ ಎಂದು ಮನೆಯವರ ಬಳಿ ತಿಳಿಸಿದ್ದಾಳೆ. ಗಾಯವಾಗಿದೆ ಎಂದು ಮನೆಯವರು ಮಗುವಿಗೆ ಅರಿಸಿನ ಪುಡಿ ಚಿಮುಕಿಸಿದ್ದಾರೆ. ನಂತರ ವಾಂತಿ ಮಾಡುತ್ತಿದ್ದ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಹಾವು ಕಡಿದು ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
Next Story