ಬಿಳಿಕಲೆಗಳು ಹರಡುವುದನ್ನು ತಡೆಯಲು ಇಲ್ಲಿವೆ ಉಪಾಯಗಳು
ನಮ್ಮ ಚರ್ಮಕ್ಕೆ ಬಣ್ಣ ನೀಡುವ ಮೆಲಾನಿನ್ ಅಥವಾ ವರ್ಣದ್ರವ್ಯ ಕೋಶಗಳು ನಾಶವಾದರೆ ಶರೀರದ ಯಾವುದೇ ಭಾಗದಲ್ಲಿ ಬಿಳಿಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ವಿಟಿಲಿಗೊ ಅಥವಾ ತೊನ್ನು ದಾಳಿಯಿಡಲಿದೆ ಎನ್ನುವುದರ ಮುನ್ಸೂಚನೆಯಾಗಿದೆ.
ವಿಟಿಲಿಗೊ ಸದ್ದಿಲ್ಲದೆ ನಮ್ಮ ಶರೀರವನ್ನು ಆಕ್ರಮಿಸಿಕೊಳ್ಳುತ್ತದೆ. ಶರೀರದಲ್ಲಿ ಬಿಳಿಕಲೆಗಳು ಕಾಣಿಸಿಕೊಂಡಾಗಲಷ್ಟೇ ಅದು ನಮ್ಮ ಗಮನಕ್ಕೆ ಬರುತ್ತದೆ. ಈ ಬಿಳಿಕಲೆಗಳು ಶರೀರ ದಲ್ಲಿ ಹರಡುತ್ತ ಹೋದಂತೆ ವ್ಯಕ್ತಿಯು ಹತಾಶನಾಗುತ್ತಾನೆ. ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿ ಖಿನ್ನತೆಯೂ ಆವರಿಸಿಕೊಳ್ಳುತ್ತದೆ.
ವಾಸ್ತವವಾಗಿ ಬಿಳಿಕಲೆಗಳು ಉಂಟಾಗುವುದು ಒಂದು ರೋಗವೇ ಅಲ್ಲ.ವರ್ಣ ದ್ರವ್ಯಕೋಶಗಳು ನಾಶಗೊಂಡು ಚರ್ಮವು ಬಣ್ಣ ಕಳೆದುಕೊಳ್ಳುತ್ತದೆ. ರೋಗಾಣುಗಳು ಅಥವಾ ಕೆಟ್ಟ ರಕ್ತ ಇದಕ್ಕೆ ಕಾರಣವಲ್ಲ.ಇದು ಸಾಂಕ್ರಾಮಿಕವೂ ಅಲ್ಲ.ವಿಟಿಲೊಗೊ ಹೇಗೆ ಉಂಟಾಗುತ್ತದೆ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ.
ಆದರೆ ‘ಆಟೋಇಮ್ಯುನಿಟಿ’ ಇದಕ್ಕೆ ಕಾರಣ ಎನ್ನುವುದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವ ಸಿದ್ಧಾಂತವಾಗಿದೆ. ಇಮ್ಯುನಿಟಿ ಅಂದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಅಂಗಾಂಗಗಳು ಮತ್ತು ಅಂಗಾಂಶಗಳಿಗೆ ವಿರುದ್ಧವಾಗಿ ವರ್ತಿಸಿದಾಗ ವರ್ಣದ್ರವ್ಯಕೋಶಗಳು ನಾಶವಾಗುತ್ತವೆ.
ನಾವು ಸೇವಿಸುವ ಆಹಾರ, ಪ್ರಬಲ ಸೋಂಕು ನಿರೋಧಕಗಳು, ಭಾವನಾತ್ಮಕ ತೊಂದರೆ, ವಾತಾವರಣದಲ್ಲಿ ಬದಲಾವಣೆ, ಸುಟ್ಟಗಾಯಗಳು ಇತ್ಯಾದಿಗಳು ಈ ಸಮಸ್ಯೆಗೆ ಕಾರಣಗಳಾಗಿವೆ. ಹೆಚ್ಚಿನ ವಿಟಿಲಿಗೊ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಸಿ ಸೇವನೆ ಕಂಡುಬಂದಿದೆ.
ಹುಳಿಬಂದ ಆಹಾರ, ಮೊಸರು, ಮೊಟ್ಟೆಯಲ್ಲಿನ ಬಿಳಿಯ ಭಾಗ ಇತ್ಯಾದಿಗಳ ಸೇವನೆಯಿಂದ ಬಿಳಿಕಲೆಗಳು ವೇಗವಾಗಿ ಹರಡುತ್ತವೆ.
ಬಿಳಿಕಲೆಗಳು ಹರಡುವುದನ್ನು ತಡೆಯಲು ಕೆಲವು ಅತ್ಯುತ್ತಮ ಮಾರ್ಗಗಳಿಲ್ಲಿವೆ.
ಒತ್ತಡವನ್ನು ನಿವಾರಿಸಿಕೊಳ್ಳುವುದು
ದೈಹಿಕ ಅಥವಾ ಭಾವನಾತ್ಮಕ ಒತ್ತಡ ಬಿಳಿಕಲೆಗಳು ಹರಡಲು ಪ್ರಮುಖ ಕಾರಣ ವಾಗಿದೆ. ಜೀವನಶೈಲಿಯಲ್ಲಿಬದಲಾವಣೆಗಳು ಅಥವಾ ಯೋಗ, ಧ್ಯಾನ ಇತ್ಯಾದಿಗಳಲ್ಲಿತೊಡಗುವಿಕೆಮತ್ತು ಮಾನಸಿಕ ಶಾಂತಿಯನ್ನು ನೀಡುವವ್ಯಾಯಾಮಗಳಮೂಲಕಒತ್ತಡದಿಂದ ಪಾರಾಗಬಹುದು.
ಮೂಲಂಗಿ ಬೀಜಗಳು
ಮೂಲಂಗಿ ಬೀಜಗಳು ಶರೀರದಲ್ಲಿಮೆಲಾನಿನ್ ಉತ್ಪಾದನೆಯನ್ನು ಹೆಚ್ಚಿಸುವಮೂಲಕ ಬಿಳಿಕಲೆಗಳನ್ನು ಕಡಿಮೆಗೊಳಿಸಲು ನೆರವಾಗುತ್ತವೆ. 50 ಗ್ರಾಂಮೂಲಂಗಿ ಬೀಜಗಳನ್ನು 60 ಮಿ.ಲೀ.ಆ್ಯಪಲ್ ಸಿಡರ್ ವಿನೆಗರ್ನೊಂದಿಗೆ ದಪ್ಪವಾಗಿ ಅರೆದು ಬಿಳಿಕಲೆಗಳಾದ ಭಾಗದಲ್ಲಿ ಹಚ್ಚಿ 15 ನಿಮಿಷಗಳ ಕಾಲ ಬಿಡಬೇಕು.ಕನಿಷ್ಠಆರು ತಿಂಗಳ ಕಾಲ ಈ ಚಿಕಿತ್ಸೆಯನ್ನು ಮುಂದುವರಿಸಬೇಕು.
ತಾಮ್ರದ ಪಾತ್ರೆಯಲ್ಲಿನ ನೀರು
ತಾಮ್ರದ ಪಾತ್ರೆಯಲ್ಲಿರಿಸಿದ ನೀರಿನ ಸೇವನೆ ಬಿಳಿಕಲೆಗಳು ಹರಡುವುದನ್ನು ತಡೆಯಲು ಉಪಯುಕ್ತ ವಿಧಾನವಾಗಿದೆ. ತಾಮ್ರದ ಕಣಗಳು ಸೇರಿದ ನೀರು ವಿಟಿಲಿಗೊದಿಂದ ಉತ್ತಮ ಪರಿಹಾರವನ್ನು ನೀಡುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಸಿಹಿ ತುಳಸಿ ಎಲೆಗಳು
ಸಿಹಿ ತುಳಸಿಎಲೆಗಳನ್ನು ಜಜ್ಜಿಬಂದರಸಕ್ಕೆಲಿಂಬೆಹಣ್ಣಿನ ರಸವನ್ನು ಬೆರೆಸಿ ಬಿಳಿಕಲೆಗಳು ಕಾಣಿಸಿಕೊಂಡಿರುವ ಜಾಗಗಳಿಗೆ ಲೇಪಿಸಬೇಕು.ಇದು ಬಿಳಿಕಲೆಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಗಾಯಗಳ ಬಗ್ಗೆ ಎಚ್ಚರವಿರಲಿ
ಶರೀರಕ್ಕೆ ಗಾಯಗಳಾದಾಗ ಅವು ಉಲ್ಬಣಿಸದಂತೆ ಎಚ್ಚರಿಕೆ ವಹಿಸಬೇಕು.ಗಾಯವು ಇತರ ಭಾಗಗಳಿಗೆ ಹರಡಿದರೆ ಬಿಳಿಕಲೆಗಳು ಉಂಟಾಗುವ ಸಾಧ್ಯತೆಗಳಿವೆ.
ಸೂರ್ಯನ ಬಿಸಿಲಿನಿಂದ ರಕ್ಷಣೆಯಿರಲಿ
30 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಬಿಸಿಲಿನಲ್ಲಿ ಹೊರಹೋಗುವ ಮುನ್ನ ಸನ್ಸ್ಕ್ರೀನ್ ಪ್ರೊಟೆಕ್ಷನ್ ಕ್ರೀಮ್ ಆಥವಾ ಲೋಷನ್ ಹಚ್ಚಿಕೊಳ್ಳುವುದರಿಂದ ಬಿಳಿಕಲೆಗಳಿಂದ ಪಾರಾಗಬಹುದು.
ಅಂಜೂರ ಮತ್ತು ಅಕ್ರೋಟು
ಅಂಜೂರದ ಹಣ್ಣುಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಿನ್ನುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಇದೇ ವೇಳೆ ಅಕ್ರೋಟುಗಳ ಸೇವನೆಯೂ ಬಿಳಿಕಲೆಗಳ ಹರಡುವಿಕೆಯನ್ನು ತಡೆಯುವಲ್ಲಿ ನೆರವಾಗುತ್ತದೆ.
ಬೇವಿನ ಎಲೆಗಳು
ಪ್ರತಿದಿನ ಎರಡು ಬಾರಿ ಬೇವಿನ ಎಲೆಗಳ ರಸವನ್ನು ಕುಡಿಯುವುದು ಉತ್ತಮ ಪರಿಣಾಮವನ್ನು ಬೀರುತ್ತದೆ. ಈ ರಸದಲ್ಲಿ ಬಿಳಿಕಲೆಗಳನ್ನು ತಡೆಯುವ ಖನಿಜಾಂಶಗಳು ಹೇರಳ ಪ್ರಮಾಣದಲ್ಲಿರುತ್ತವೆ.