ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು
ಸುಂಟಿಕೊಪ್ಪ, ಅ.20: ಗರಗಂದೂರು ಬಳಿ ನಿಂತಿದ್ದ ಪಾದಚಾರಿಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, ಸಹ ಸವಾರ ಗಾಯಗಳಿಂದ ಜಿಲ್ಲಾ ಆಸ್ಪತ್ರೆಗೆ ದಾಖಲು.
ಮದೆನಾಡುವಿನ ಬೆಟ್ಟತ್ತೂರು ಗ್ರಾಮದ ನಿವಾಸಿ ತಮ್ಮಯ್ಯ (65) ಮೃತಪಟ್ಟವರೆಂದು ಗುರುತಿಸಲಾಗಿದೆ.
ತಮ್ಮಯ್ಯ ಅವರು ಸಂಬಂಧಿಕರ ಪಿತೃ ಪಕ್ಷ ಕಾರ್ಯಕ್ಕಾಗಿ ಆಗಮಿಸಿ ಕಾರ್ಯವನ್ನು ಮುಗಿಸಿ ತಮ್ಮ ಊರಿಗೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭ ಮಾದಾಪುರ ಜಂಬೂರು ಬಾಣೆಯ ನಿವಾಸಿ ಚಾಲಕ ಪ್ರಶಾಂತ್ ಹಾಗೂ ಹರೀಶ್ ಎಂಬವರು ಸುಂಟಿಕೊಪ್ಪ ಕಡೆಗೆ ಆಗಮಿಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ತಮ್ಮಯ್ಯ ಅವರಿಗೆ ಢಿಕ್ಕಿ ಹೊಡಿದಿದ್ದು, ಪರಿಣಾಮ ನಿಂತಿದ್ದ ತಮ್ಮಯ್ಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





