ಮಂಡ್ಯ: ಪುಷ್ಕರಿಣಿಯಲ್ಲಿ ಮುಳುಗಿ ಭಕ್ತ ಮೃತ್ಯು
ಮಂಡ್ಯ, ಅ.20: ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿನ ಪವಿತ್ರ ಪುಷ್ಕರಿಣಿಯಲ್ಲಿ (ಕೊಳದಲ್ಲಿ) ಮುಳುಗಿ ಭಕ್ತನೋರ್ವ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಸಾಸಲುಕೊಪ್ಪಲು ಗ್ರಾಮದ ಅಣ್ಣಯ್ಯಪ್ಪ(45) ಮೃತಪಟ್ಟವರಾಗಿದ್ದು, ಇವರು ಸಾಸಲು ಗ್ರಾಮದಲ್ಲಿ ದೀಪಾವಳಿ ಅಂಗವಾಗಿ ನಡೆದ ಮಾಣಿಕಶೆಟ್ಟಿ ಹಾಗೂ ಸಗಣಿ ಹಬ್ಬ ವೀಕ್ಷಿಸಲು ಈತ ಬಂದಿದ್ದರು. ಸಗಣಿ ಹಬ್ಬದ ಬಡಿದಾಟದಲ್ಲಿ ಗುದ್ದಾಡಿದ ಅಣ್ಣಯ್ಯ ಮೈತೊಳೆದುಕೊಳ್ಳಲು ತನ್ನ ಜತೆಯಿದ್ದ ಗ್ರಾಮದ ಹುಡುಗರ ಜೊತೆ ಕೊಳಕ್ಕೆ ಇಳಿದಿದ್ದು, ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





