ಪಿಡಿಪಿ ಶಾಸಕನ ನಿವಾಸಕ್ಕೆ ಗ್ರೆನೇಡ್ ಎಸೆದ ಉಗ್ರರು

ಶ್ರೀನಗರ, ಅ. 18: ಜಮ್ಮು ಹಾಗೂ ಕಾಶ್ಮೀರದ ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನದಲ್ಲಿ ಆಡಳಿತಾರೂಡ ಪಿಡಿಪಿ ಶಾಸಕನ ಮನೆ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ದಾರೆ.
ಆದರೆ, ಗ್ರೆನೇಡ್ ಸ್ಫೋಟದ ಸಂದರ್ಭ ಶಾಸಕ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿದ್ದ ಕುಟುಂಬದ ಸದಸ್ಯರಿಗೆ ಯಾವುದೇ ಗಾಯಗಳಾಗಿಲ್ಲ.
ಶೋಫಿಯಾನ ಜಿಲ್ಲೆಯ ಝೈನಪೋರಾ ಪ್ರದೇಶದಲ್ಲಿರುವ ಪಿಡಿಪಿ ಶಾಸಕ ಏಜಾಝ್ ಅಹ್ಮದ್ ಮಿರ್ ಅವರ ನಿವಾಸದ ಮೇಲೆ ಉಗ್ರರು ಗ್ರೆನೇಡ್ ಎಸೆದರು ಎಂದು ಶೋಪಿಯಾನದ ಪೊಲೀಸ್ ಅಧೀಕ್ಷಕ ಅಂಬ್ರಾರ್ಕರ್ ಶ್ರೀರಾಮ್ ದಿನಕರ್ ತಿಳಿಸಿದ್ದಾರೆ.
ಗ್ರೆನೇಡ್ ಮನೆಯ ಕಂಪೌಂಡ್ ಒಳಗಡೆ ದೊಡ್ಡ ಸದ್ದಿನೊಂದಿಗೆ ಸ್ಫೋಟಗೊಂಡಿದೆ. ಆದರೆ, ಈ ಸ್ಫೋಟದಿಂದ ಯಾವುದೇ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ದಿನಕರ್ ತಿಳಿಸಿದ್ದಾರೆ.
Next Story





