ಮಣಿಪಾಲ: ವಾಗ್ಶಾದಲ್ಲಿ ಅಂ.ರಾ. ಚೆಫ್ ಡೇ ಆಚರಣೆ

ಮಣಿಪಾಲ, ಅ.20: ಅಂತಾರಾಷ್ಟ್ರೀಯ ಚೆಫ್ ಡೇ (ಬಾಣಸಿಗರ ದಿನ)ಯನ್ನು ಮಣಿಪಾಲದ ವೆಲ್‌ಕಮ್ ಗ್ರೂಪ್ ಗ್ರಾಜ್ಯುವೆಟ್ ಸ್ಕೂಲ್ ಆಪ್ ಹೊಟೇಲ್ ಮ್ಯಾನೇಜ್‌ಮೆಂಟ್ ಹಾಗೂ ಅಡುಗೆ ಕಲೆ ವಿಭಾಗದ ವತಿಯಿಂದ ಮಣಿಪಾಲದಲ್ಲಿ ಶುಕ್ರವಾರ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ದೇಶ-ವಿದೇಶಗಳ ಪ್ರಮುಖ ಬಾಣಸಿಗರನ್ನು ನೆನಪಿಸಿ ಕೊಂಡು ಉದ್ಯಮದ ಬೆಳವಣಿಗೆ, ಅಭಿವೃದ್ಧಿಯಲ್ಲಿ ಅವರ ಪಾತ್ರಗಳ ಕುರಿತು ಪ್ರಶಂಸೆಯ ಮಾತುಗಳನ್ನಾಡಲಾಯಿತು.
ಇದೇ ವೇಳೆ ವಾಗ್ಶಾದ ವಿದ್ಯಾರ್ಥಿಗಳಿಗೆ ವಿವಿದ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಅವರಿಗೆ ಅವರ ಪತ್ರಿಭೆಗಳನ್ನು ಪ್ರದರ್ಶಿಸಲು, ಅಡುಗೆಯಲ್ಲಿ ಅವರ ಕ್ರಿಯಾಶೀಲತೆಯನ್ನು, ನವೀನತೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಯಿತು.
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಭಾರತೀಯ ಅಡುಗೆ, ಬೇಕರಿ ಪದಾರ್ಥಗಳ ಮೂಲ ತಿನಿಸು ಹಾಗೂ ಅಡುಗೆ ಕಲೆಯಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಬೇಕಿಂಗ್‌ನಲ್ಲಿ ಇತ್ತೀಚಿನ ತಂತ್ರಜ್ಞಾನ, ಪಾನ್‌ಏಷ್ಯನ್ ವಿಧಾನ ಹಾಗೂ ಸಮಕಾಲೀನ ಯುರೋಪಿಯನ್ ಅಡುಗೆಯ ಕುರಿತಂತೆ ಸ್ಪರ್ಧೆ ನಡೆಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ವೈಸ್ ಪ್ರಿನ್ಸಿಪಾಲ್ ಕೆ.ತಿರು ಬೋಧಿಸಿದರು. ಪ್ರಿನ್ಸಿಪಾಲ್ ಪ್ರೊ.ಪರ್ವತವರ್ಧಿನಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.







