‘ಭೂಮಿಯಲ್ಲೇ ನರಕ ಕಾಣುತ್ತಿರುವ’ ರೋಹಿಂಗ್ಯನ್ನರ ಮಕ್ಕಳು: ಯುನಿಸೆಫ್

ನಜಿನೇವ, ಅ. 20: ಮ್ಯಾನ್ಮಾರ್‌ನಲ್ಲಿ ಸೇನೆಯ ಹಿಂಸೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯಾ ಮುಸ್ಲಿಮರ ಮಕ್ಕಳು, ಕಿಕ್ಕಿರಿದ, ಕೆಸರಿನಿಂದ ತುಂಬಿದ ಹಾಗೂ ಸ್ವಚ್ಛತೆಯಿಲ್ಲದ ನಿರಾಶ್ರಿತ ಶಿಬಿರಗಳಲ್ಲಿ ‘ಭೂಮಿಯಲ್ಲೇ ನರಕ ಕಾಣುತ್ತಿದ್ದಾರೆ’ ಎಂದು ಯನಿಸೆಫ್ ಹೇಳಿದೆ.
ಕಳೆದ ಎಂಟು ವಾರಗಳ ಅವಧಿಯಲ್ಲಿ ಮ್ಯಾನ್ಮಾರ್‌ನಿಂದ ತಪ್ಪಿಸಿಕೊಂಡು ಕಾಕ್ಸ್ ಬಝಾರ್‌ಗೆ ಪಲಾಯನಗೈದಿರುವ ರೊಹಿಂಗ್ಯಾ ನಿರಾಶ್ರಿತರ ಪೈಕಿ 58 ಶೇಕಡ ಮಕ್ಕಳಿದ್ದಾರೆ.
ಈ ಮಕ್ಕಳ ಪಾಡಿನ ಬಗ್ಗೆ ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ (ಯುನಿಸೆಫ್) ವರದಿಯೊಂದನ್ನು ಬಿಡುಗಡೆ ಮಾಡಿದೆ.
ಈ ಪ್ರದೇಶದಲ್ಲಿರುವ ಪ್ರತಿ ಐವರು ಮಕ್ಕಳಲ್ಲಿ ಒಂದು ಮಗು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದು ವರದಿಯ ಲೇಖಕ ಸೈಮನ್ ಇನ್‌ಗ್ರಾಮ್ ಹೇಳುತ್ತಾರೆ.
Next Story





