ತೊಕ್ಕೊಟ್ಟು: ಅ. 22ರಂದು ‘ಸಿಟಿ ಮಾರ್ಕೆಟ್’ ವಾಣಿಜ್ಯ ಸಂಕೀರ್ಣ ಉದ್ಘಾಟನೆ
ಮಂಗಳೂರು, ಅ. 20: ಸಿಟಿ ಲ್ಯಾಂಡ್ ಡೆವಲಪರ್ಸ್ ಸಂಸ್ಥೆಯ ವತಿಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಾಣಿಜ್ಯ ಸಂಕೀರ್ಣ ‘ಸಿಟಿ ಮಾರ್ಕೆಟ್’ ಅ. 22ರಂದು ಸಂಜೆ 4:30ಕ್ಕೆ ಉದ್ಘಾಟನೆಗೊಳ್ಳಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅವರು ನೂತನ ‘ಸಿಟಿ ಮಾರ್ಕೆಟ್’ನ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಚಿರುಂಬ ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಹಾಸ ಉಳ್ಳಾಲ ಭಾಗವಹಿಸಲಿದ್ದಾರೆ.
Next Story





