110 ಜನರ ಬಂಧನಕ್ಕೆ ಟರ್ಕಿ ಆದೇಶ

ಇಸ್ತಾಂಬುಲ್ (ಟರ್ಕಿ), ಅ. 20: ಅಮೆರಿಕದಲ್ಲಿ ನೆಲೆಸಿರುವ ಧರ್ಮಗುರು ಫೆತುಲ್ಲಾ ಗುಲೇನ್ ಜೊತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಮುಟ್ಟುಗೋಲು ಹಾಕಲಾದ ಕಂಪೆನಿಯೊಂದರ 110 ಜನರನ್ನು ಬಂಧಿಸಲು ಟರ್ಕಿ ಅಧಿಕಾರಿಗಳು ಬಂಧನಾದೇಶ ಹೊರಡಿಸಿದ್ದಾರೆ ಎಂದು ಡೋಗನ್ ವಾರ್ತಾ ಸಂಸ್ಥೆ ಮತ್ತು ಇತರ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ಗುಲೇನ್ ಕಳೆದ ವರ್ಷ ನಡೆದ ವಿಫಲ ಸೇನಾ ಕ್ಷಿಪ್ರಕ್ರಾಂತಿಯ ರೂವಾರಿಯಾಗಿದ್ದಾರೆ ಎಂದು ಟರ್ಕಿ ಆರೋಪಿಸಿದೆ.
ಪ್ರಕಾಶನ ಸಂಸ್ಥೆ ‘ಕೇನಕ್‌ಹೋಲ್ಡಿಂಗ್’ ಮತ್ತು ಅದಕ್ಕೆ ಸಂಬಂಧಿಸಿದ ಕಂಪೆನಿಗಳ ಮ್ಯಾನೇಜರ್‌ಗಳು, ಪಾಲುದಾರರು ಮತ್ತು ಉದ್ಯೋಗಿಗಳು ಸೇರಿದಂತೆ ಶಂಕಿತರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವಾರ್ತಾ ಸಂಸ್ಥೆ ತಿಳಿಸಿದೆ.
Next Story





