ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು
ಮಂಗಳೂರು, ಅ. 20: ಕೂಳೂರು- ಕಾವೂರು ರಸ್ತೆಯ ಶಾಂತಿನಗರದಲ್ಲಿ ಗುರುವಾರ ರಾತ್ರಿ ರಸ್ತೆ ಬದಿಯ ಮಣ್ಣಿನ ರಾಶಿಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಕುಂಜತ್ತಬೈಲ್ ದೇವಿನಗರದ ನಿವಾಸಿ ಯುವಕ ಪ್ರಕಾಶ್ (20) ಎಂಬವರು ಮೃತಪಟ್ಟಿದ್ದಾರೆ.
ಮೃತ ಪ್ರಕಾಶ್ ನಗರದ ವಿ.ವಿ. ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿಯಾಗಿದ್ದಾರೆ. ಪ್ರಕಾಶ್ ಅವರು ಗುರುವಾರ ಸಂಜೆ ಸುರತ್ಕಲ್‌ಗೆ ಹೋಗಿದ್ದು, ರಾತ್ರಿ 11 ಗಂಟೆ ವೇಳೆಗೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಶಾಂತಿನಗರದಲ್ಲಿ ನೀರಿನ ಪೈಪ್‌ಲೈನ್ ಕಾಮಗಾರಿ ಮುಂದುವರಿದಿದ್ದು, ಅಗೆದ ಮಣ್ಣನ್ನು ಬದಿಯಲ್ಲಿ ರಾಶಿ ಹಾಕಲಾಗಿತ್ತು. ಪ್ರಕಾಶ್ ಚಲಾಯಿಸುತ್ತಿದ್ದ ಸ್ಕೂಟರ್ ಮಣ್ಣಿನ ರಾಶಿಗೆ ಢಿಕ್ಕಿ ಹೊಡೆದಿತ್ತು ಎನ್ನಲಾಗಿದೆ. ಪರಿಣಾಮವಾಗಿ ಸ್ಕೂಟರ್ ಮಗುಚಿ ರಸ್ತೆಗೆ ಬಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





